ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ದುರ್ಗಾನಗರ ಅಜ್ಜಿನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದಲ್ಲಿ 18 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಅಧ್ಯಾಪಕರಾದ ಪುರುಷೋತ್ತಮ ಗೌಡ ಓಟೆತ್ತಡ್ಕ ವಹಿಸಿದ್ದರು..
ಧಾರ್ಮಿಕ ಉಪನ್ಯಾಸವನ್ನು ರಾಷ್ಟ್ರ ಸೇವಿಕ ಸಮಿತಿ ಪ್ರಾಂತ ಸಹ ಭೌದ್ಧಿಕ್ ಪ್ರಮುಖ್ ಕುಮಾರಿ ಮೀನಾಕ್ಷಿ ರಾಯಿ ಅವರು ಮಾಡಿದರು.
ಸಮಿತಿ ಅಧ್ಯಕ್ಷ ಮಹಾಬಲ ನೀರ್ಕಜೆ ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಾದ ಶ್ರೀಮತಿ ರೇವತಿ ನಿವೃತ್ತ ಶಿಕ್ಷಕಿ ನೀರ್ಕಜೆ, ಅಣ್ಣು ಅಜಿಲ ದೈವ ನರ್ತಕರು ನಡುಸಾರು, ಪೂವ ಮೂಲ್ಯ ಕೃಷಿ ಕಾಂಟ್ರಾಕ್ಟ್ ದಾರರು ಬಾಳೆಕುಮೇರಿ, ಮಾಲತಿ ಎನ್ ಎಸ್ ಆರೋಗ್ಯ ಕಾರ್ಯಕರ್ತೆ ಅಜ್ಜಿನಡ್ಕ , ಬಿ. ತಿಮ್ಮಪ್ಪ ನಾಯ್ಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಕೆಲಿಂಜ ಶಾಲೆ , ಜನಾರ್ಧನ ಮೂಲ್ಯ ದಾನಿಗಳು ಕುಕ್ಕೆಬೆಟ್ಟು , ಲೋಕೇಶ್ ಆಚಾರ್ಯ ಪದವು ಇವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಕರುಣಾಕರ ಗೌಡ ಸಂಕೇಶ ಸ್ವಾಗತಿಸಿ, ಬಾಬು ನಾಯ್ಕ ಅಜ್ಜಿನಡ್ಕ ವಂದಿಸಿ, ಯಶೋಧರ ಮೂಲ್ಯ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯರು ಸಹಕರಿಸಿದರು..