ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ವಿಟ್ಲ ಇದರ ಸಾಲೆತ್ತೂರು ಕಾರ್ಯಕ್ಷೇತ್ರದ ಕಟಿಲೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ನೀರಿನ ಬಳಕೆ, ಸಂಚಾರಿ ನಿಯಮದ ಬಗ್ಗೆ, ಮನುಷ್ಯನರಿಗೆ ಬರುವ ಕಾಯಿಲೆಗಳ ಬಗ್ಗೆ, ಪ್ಲಾಸ್ಟಿಕ್ ಬಳಕೆಯಿಂದಾಗುವ ಸಮಸ್ಯೆಗಳ ಬಗ್ಗೆ, ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಬರುವ ಸಮಸ್ಯೆಗಳ ಬಗ್ಗೆ, ಅರಿವು ಮೂಡಿಸಲು ಸಂಸಾರ ಕಲಾತಂಡ ಜೋಡುಮಾರ್ಗ ಬಿಸಿ ರೋಡ್ ಇವರಿಂದ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಾಲೆತ್ತೂರು ವಲಯದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಒಕ್ಕೂಟ ಅಧ್ಯಕ್ಷರಾದ ಈಶ್ವರ ಪೂಜಾರಿ, ಶೌರ್ಯವಿಪತ್ತು ನಿರ್ವಹಾನ ತಂಡದ ಅಧ್ಯಕ್ಷರಾದ ಪುರುಷೋತ್ತಮ,ಹಿರಿಯ ಕಲಾವಿದರಾದ ಆನಂದ ದೇವಾಡಿಗ, ಸಂಸಾರ ಕಲಾ ತಂಡ ಜೋಡುಮಾರ್ಗಾ ಇದರ ಮುಖ್ಯಸ್ಥರಾದ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.

ಒಕ್ಕೂಟ ಪದಾಧಿಕಾರಿಗಳು ಜ್ಞಾನ ವಿಕಾಸ ಕೇಂದ್ರ ದ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಸೇವಾಪ್ರತಿನಿಧಿ ಕುಶಲ ಸ್ವಾಗತಿಸಿ, ಪ್ರಮಿತಾ ವಂದಿಸಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.