ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ಪಂಚಾಯಿತಿಯಲ್ಲಿ ರೋಜ್‌ಗಾರ್‌ ಮತ್ತು ನರೇಗಾ ದಿನಾಚರಣೆ ನಡೆಯಿತು.

ಗ್ರಾ .ಪಂ. ಅಭಿವೃದ್ಧಿ ಅಧಿಕಾರಿಗಳು, ತಾ. ಪಂ. ಸಹಾಯಕ ನಿರ್ದೇಶಕರಾದ ವಿಶ್ವನಾಥ್‌ ಬಿ. ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಅರ್ಜಿ ಸಲ್ಲಿಸಿ ಗ್ರಾಮದ ಅರ್ಹ ಫಲಾನುಭವಿಗಳು ಕಾಮಗಾರಿ ಕೈಗೊಳ್ಳಬೇಕು. ವರ್ಷದಲ್ಲಿ 100 ದಿನಗಳನ್ನು ಪೂರೈಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಗ್ರಾಮ ಪಂಚಾಯತ್‌ ಕಾರ್ಯಕ್ರಮ, ಸಭೆಗಳಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾದಂತೆ ಸರ್ಕಾರದ ಯೋಜನೆ ಮಾಹಿತಿಯನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ನರೇಗಾ ತಾಲೂಕು ಐಇಸಿ ಸಂಯೋಜಕ ರಾಜೇಶ್‌ ಮಾತನಾಡಿ, ನರೇಗಾ ಯೋಜನೆಯ ಆರಂಭ ಹಾಗೂ ಗ್ರಾಮಸ್ಥರು ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ತಿಳಿಸಿದರು.

ಅಮೃತ ಆರೋಗ್ಯ ತಾಲೂಕು ಸಂಯೋಜಕ ಅಲ್ಲಾಭಕ್ಷ್‌ ಅವರು ಆಯುಷ್ಮಾನ್‌ ಕಾರ್ಡ್‌ ಮಾಡಿಸಿಕೊಳ್ಳುವುದು, ಅದರಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.

ಇದೇ ವೇಳೆ 2023-24ನೇ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಂಡು 100 ಮಾನವ ದಿನಗಳನ್ನು ಪೂರೈಸಿದ ಫಲಾನುಭವಿ ಮಾಲತಿ ಅವರಿಗೆ ಸಸಿ ವಿತರಿಸಲಾಯಿತು.

ಹಸಿರೇ ಉಸಿರು ಧ್ಯೇಯದಡಿ ಗ್ರಾಮ ಆವರಣದಲ್ಲಿ ಗಿಡ ನೆಡಲಾಯಿತು. ಗ್ರಾಪಂ ಉಪಾಧ್ಯಕ್ಷೆ ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶಶಿಕಲಾ, ಪುರಂದರ ಗೌಡ ಹಾಗೂ ಗ್ರಾ. ಪಂ. ಸಿಬ್ಬಂದಿ ಕುಶಾಲ್, ಲಿಂಗಪ್ಪ ಟಿ., ಹರಿಣಾಕ್ಷಿ, ಸೇವಂತಿಕ ರೈ, ಮಮತಾ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಪ್ರೇಮಲತಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.