ಅನಂತಾಡಿ ಬಿಜೆಪಿ ಶಕ್ತಿಕೇಂದ್ರದ ನೂತನ ಬೂತ್ ಸಮಿತಿ ರಚನೆಯು ಶಕ್ತಿಕೇಂದ್ರ ಪ್ರಮುಖ್ ಮಹಾಬಲ ಪೂಜಾರಿ ಬಾಕಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಬೂತ್ ಸಮಿತಿ ರಚನೆಯ ಉಸ್ತುವಾರಿ ತನಿಯಪ್ಪ ಗೌಡ, ಮಂಡಲ ರೈತ ಮೋರ್ಚಾದ ಅಧ್ಯಕ್ಷರಾದ ಸನತ್ ಕುಮಾರ್ ರೈ, ಮಾಣಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ಭಂಡಾರಿ, ಹಿರಿಯರಾದ ನಾರಾಯಣ ಶೆಟ್ಟಿ, ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕರಾದ ಶಿವರಾಮ್ ಶೆಟ್ಟಿ, ಮಂಡಲ ಮಹಿಳಾ ಮೋರ್ಚಾದ ಸದಸ್ಯೆ ಮತ್ತು ಪಂಚಾಯತ್ ಅಧ್ಯಕ್ಷೆ ಸುಜಾತಾ ಪೂಜಾರಿ, ಮಂಡಲ ಎಸ್.ಸಿ ಮೋರ್ಚಾದ ಸದಸ್ಯ ದಿನಕರ್, ಪಂಚಾಯತ್ ಉಪಾಧ್ಯಕ್ಷೆ ಸಂಧ್ಯಾ, ಪಂಚಾಯತ್ ಸದಸ್ಯ ಕುಸುಮಾಧರ ಗೌಡ ಮತ್ತು ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.