ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಆಮ್ಟೂರು ಶಕ್ತಿ ಕೇಂದ್ರದ 181,182,ಬೂತ್ ಸಮಿತಿಯ ಸಂಘಟನಾ ಪರ್ವದ ಮೂಲಕ ಬೂತ್ ಕಾರ್ಯದ ಸಭೆಯು ಆಮ್ಟೂರು ಶ್ರೀ ಕೃಷ್ಣ ಮಂದಿರದಲ್ಲಿ ಆಮ್ಟೂರು ಶಕ್ತಿ ಕೇಂದ್ರದ ಪ್ರಮುಖ್ ಗೋಪಾಲಕೃಷ್ಣ ಪೂವಳ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಸಂಘಟನಾ ಪ್ರಭಾರಿ ಮಂಗಳೂರು ವಿಧಾನಸಭಾ ಕ್ಷೇತ್ರ ದಿನೇಶ್ ಆಮ್ಟೂರು ಮಾತನಾಡಿ ಸಂಘಟನಾ ಪರ್ವದ ವಿಚಾರವನ್ನು ಹಾಗೂ ಭಾರತೀಯ ಜನತಾ ಪಾರ್ಟಿಯ ಬಲವರ್ಧನೆಗೆ ಹಾಗೂ ಯಶಸ್ಸಿಗೆ ನಾವೆಲ್ಲರೂ ಶ್ರಮ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಮ್ಟೂರು ಶಕ್ತಿ ಕೇಂದ್ರದ ಪ್ರಭಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್
ಕಡೆಶಿವಾಲಯ ಸಂಘಟನಾ ಪರ್ವದ ಮೂಲಕ ಬೂತ್ ಸಮಿತಿಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ 181 ಬೂತ್ ಸಮಿತಿಯ ಅಧ್ಯಕ್ಷರಾಗಿ ಮಹಾಬಲ ಸಾಲಿಯನ್ ಮುಳಿಕೊಡಂಗೆ ಕಾರ್ಯದರ್ಶಿಯಾಗಿ ಸಂದೀಪ್ ಶೆಟ್ಟಿ ಬೈದರಡ್ಕ ಹಾಗು 10 ಪ್ರಮುಖರ ತಂಡ ಆಯ್ಕೆಯಾದರು.
182 ಬೂತ್ ಸಮಿತಿಯ ಅಧ್ಯಕ್ಷರಾಗಿ ಶೇಖರ್ ಕೊಟ್ಟಾರಿ ಕಾರ್ಯದರ್ಶಿಯಾಗಿ ದಾಮೋದರ ಪೂಜಾರಿ ಹಾಗೂ 10 ಪ್ರಮುಖರ ತಂಡ ಆಯ್ಕೆಯಾದರು.

ಈ ಸಂದರ್ಭದಲ್ಲಿ 181 ಬೂತ್ ಸಮಿತಿಯ ಅಧ್ಯಕ್ಷರಾಗಿ ಮಹಾಬಲ ಸಾಲಿಯನ್ ಮುಳಿಕೊಡಂಗೆ ಕಾರ್ಯದರ್ಶಿಯಾಗಿ ಸಂದೀಪ್ ಶೆಟ್ಟಿ ಬೈದರಡ್ಕ ಹಾಗು 10 ಪ್ರಮುಖರ ತಂಡ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ, ಸಂಘಟನಾ ಪ್ರಭಾರಿ ಮಂಗಳೂರು ವಿಧಾನಸಭಾ ಕ್ಷೇತ್ರ ದಿನೇಶ್ ಆಮ್ಟೂರು ಮಾತನಾಡಿ ಸಂಘಟನಾ ಪರ್ವದ ವಿಚಾರವನ್ನು ಹಾಗೂ ಭಾರತೀಯ ಜನತಾ ಪಾರ್ಟಿಯ ಬಲವರ್ಧನೆಗೆ ಹಾಗೂ ಯಶಸ್ಸಿಗೆ ನಾವೆಲ್ಲರೂ ಶ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಗೆ ಆಗಮಿಸಿದ ಕಾರ್ಯಕರ್ತ ಬಂಧುಗಳಿಗೆ ಮನಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಶ್ರೀಮತಿ ಪ್ರೇಮ, ಹಿಂದುಳಿದ ಮೋರ್ಚಾದ ಜಿಲ್ಲಾ ಸಮಿತಿಯ ಸದಸ್ಯರಾದ ಗೋಪಾಲ ಪೂಜಾರಿ, ಜಿಲ್ಲಾ ಎಸ್ ಪಿ ಮೋರ್ಚ ಉಪಾಧ್ಯಕ್ಷರಾದ ಕೃಷ್ಣಪ್ಪ ಶಾಂತಿಪಳಿಕೆ, ಬಂಟ್ವಾಳ ರೈತ ಮೋರ್ಚಾದ ಉಪಾಧ್ಯಕ್ಷರಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಬಂಟ್ವಾಳ ಹಿಂದುಳಿದ ಮೊರ್ಚಾದ ಕಾರ್ಯದರ್ಶಿಯಾದ ಯತೀಶ್ ಮೂಳಿಕೊಡಂಗೆ, ಬಂಟ್ವಾಳ ಯುವ ಮೋರ್ಚಾದ ಕಾರ್ಯದರ್ಶಿಯಾದ ಕೌಶಿಲ್ ಶೆಟ್ಟಿ ಬಾಳಿಕೆ, ವ್ಯಾಪಾರ ಪ್ರಕೋಷ್ಠದ ಜಿಲ್ಲಾ ಸದಸ್ಯರಾದ ಜಯರಾಮ್ ಶೆಟ್ಟಿಗಾರ್, ಬಂಟ್ವಾಳ ಮೀನುಗಾರರ ಪ್ರಕೋಸ್ಟ ಸಹ ಸಂಚಾಲಕರಾದ ಪ್ರಕಾಶ್ ಪೂಜಾರಿ ಹಾಗೂ ಗೊಳ್ತಮಜಲು ಗ್ರಾಮ ಪಂಚಾಯತ್ ನ ಗೌರವಾನ್ವಿತ ಸದಸ್ಯರು ಭಾರತೀಯ ಜನತಾ ಪಾರ್ಟಿಯ ಪ್ರಮುಖರು ಹಾಗೂ ದೇವದುರ್ಲಭ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.