ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಭಜನೆ, ನಂತರಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರವನ್ನು ಪರದೆಯ ಮೂಲಕ ವೀಕ್ಷಣೆ ಮಾಡಲಾಯಿತು.
ರಾತ್ರಿ ಮನೆ ಮನೆಗಳಿಂದ ತಂದಿರುವ ಹಣತೆಗಳನ್ನು ಮಂದಿರ ಸುತ್ತ ಹಚ್ಚಿ ದೀಪಾಲಂಕಾರ ಮತ್ತು ಶ್ರೀರಾಮ ಮಂದಿರದ ರೇಖಾಚಿತ್ರ ಬಿಡಿಸಿ ಅದರಲ್ಲಿ ಹಣತೆವಿಟ್ಟು ದೀಪ ಉರಿಸಿದರು.
ಬಳಿಕ ಎಲ್ಲರೂ ಒಟ್ಟಿಗೆ ಸೇರಿ 108 ಬಾರಿ ಶ್ರೀರಾಮ ನಾಮ ತಾರಕ ಜಪ ಹಾಗೂ 1990 ಮತ್ತು1992 ಕರಸೇವಕರ ಹೋರಾಟದ ವೀಡಿಯೋ ಪ್ರದರ್ಶನ ವೀಕ್ಷಣೆ ಮಾಡಿದರು.ಬಂದಿರುವ ಎಲ್ಲರಿಗೂ ಮಧ್ಯಾಹ್ನ ಮತ್ತು ರಾತ್ರಿ ಸಿಹಿ ಭೋಜನದ ವವ್ಯಸ್ಥೆಯನ್ನು ಮಾಡಲಾಗಿತ್ತು.
ಮಂದಿರದ ಅಧ್ಯಕ್ಷ ರಮೇಶ್ ಕರಿಂಗಾಣ, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು, ಪ್ರಮುಖರಾದ ಶರತ್ ಕುಮಾರ್, ದಿನೇಶ್ ಅಮ್ಟೂರು, ಗೋಪಾಲ ಪೂಜಾರಿ, ಕೌಶಿಲ್ ಶೆಟ್ಟಿ, ಮಹಾಬಲ ಕುಲಾಲ್, ಶಂಕರ ಅಂಚನ್, ಸರ್ಯ, ಜಿತೇಶ್ ಶೆಟ್ಟಿ, ಮಹಾಬಲ ಶೆಟ್ಟಿ ನಂದಾಗೋಕುಲ, ದಿವಾಕರ ಪಡೀಲ್, ಪ್ರಭಾಕರ ಶೆಟ್ಟಿ ಬೈದರಡ್ಕ, ಶೇಖರ ಕೊಟ್ಟಾರಿ, ಹರೀಶ ಪೊಯ್ಯಕಂಡ, ರೋಹಿತ್ಹಾಗೂ ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು, ಕರ್ಯಕರ್ತರು, ಮಹಿಳಾ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದರು.