ವಾಷಿಂಗ್ಟನ್/ಟೆಹ್ರಾನ್: ಇಸ್ರೇಲ್-ಇರಾನ್ ನಡುವಿನ ಸಂಘರ್ಷಕ್ಕೆ ಈಗ ಅಮೆರಿಕ ಎಂಟ್ರಿ ಆಗಿರುವುದು ಜಾಗತಿಕ ಉದ್ವಿಗ್ನತೆ ಹೆಚ್ಚಿಸಿದೆ. ಇರಾನ್ ಮೇಲೆ ಅಮೆರಿಕ ವಾಯುದಾಳಿ ಬಳಿಕ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಿಎಂ ಸಭೆ
ಅಮೆರಿಕ ಮಧ್ಯಪ್ರವೇಶದಿಂದಾಗಿ ಕಚ್ಚಾ ತೈಲ ಬೆಲೆಯು ಸುಮಾರು 120 ಡಾಲರ್‌ಗಳಿಗೆ (10,389 ರೂ.) ಏರಿಕೆಯಾಗುವ ಸಾಧ್ಯತೆಯಿದೆ. ಜೊತೆಗೆ ಚಿನ್ನದ ಬೆಲೆಯೂ ಏರಿಕೆಯಾಗಬಹುದು. ಸೋಮವಾರ (ಜೂ.23) ಎಂದು ಷೇರು ಮಾರುಕಟ್ಟೆ ತೆರೆದ ಬಳಿಕ ವಾರದ ಮೊದಲ ವಹಿವಾಟಿನಲ್ಲಿ ಇದರ ಪರಿಣಾಮ ಕಂಡುಬರುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಇರಾನ್ ಮೇಲಿನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಜಾಗತಿಕ ಉದ್ವಿಗ್ನತೆ ಹೆಚ್ಚಾಗಿದೆ. ಇದು ಅನೇಕ ದೇಶಗಳಲ್ಲಿ ಹಣದುಬ್ಬರ ಉಂಟುಮಾಡುವ ಸಾಧ್ಯತೆಯನ್ನು ತಂದೊಡ್ಡಿದೆ. ಕಳೆದ ಕೆಲ ವಾರಗಳಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ 18% ಏರಿಕೆಯಾಗಿ 79 ಡಾಲರ್‌ಗಳಿಗೆ ವಹಿವಾಟು ಆಗುತ್ತಿತ್ತು. ಸದ್ಯ ಬ್ರೆಂಟ್ ಕಚ್ಚಾ ತೈಲ 1 ಬ್ಯಾರಲ್‌ಗೆ 77.01 ಡಾಲರ್‌ನಷ್ಟಿದೆ (6,667 ರೂ.). ಅದೇ ವೇಳೆ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 73.84 ಡಾಲರ್‌ನಂತೆ (6,393 ರೂ.) ವಹಿವಾಟು ನಡೆಯುತ್ತಿದೆ. ಆದ್ರೆ ಹೆಚ್ಚಿರುವ ಉದ್ವಿಗ್ನತೆಯಿಂದ ಏಕಾಏಕಿ 120-130 ಡಾಲರ್‌ಗಳಿಗೆ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ತನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯನ್ನ ಮುಚ್ಚುವಂತೆ ಖಮೇನಿಯ ಪ್ರತಿನಿಧಿ ಹೊಸೈನ್ ಶರಿಯತ್‌ಮದಾರಿ ಪಟ್ಟುಹಿಡಿದಿದ್ದಾರೆ. ಹಾರ್ಮುಜ್ ಜಲಸಂಧಿ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾಗಿರುವುದರಿಂದ ಬಂದ್ ಮಾಡಿದ್ರೆ ಭಾರೀ ನಷ್ಟ ಅನುಭವಿಸಬೇಕಾಗುತ್ತೆ ಎಂದು ಹಡಗು ವಿಮಾ ಕಂಪನಿಗಳು ಹೇಳಿವೆ. ಇದರಿಂಧ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ. ಕೆಲ ಹಡಗು ಕಂಪನಿಗಳು ಈಗಾಗಲೇ ಪರ್ಯಾಯ ಮಾರ್ಗ ಹುಡುಕಲು ಶುರು ಮಾಡಿವೆ ಎಂದು ವರದಿಗಳು ತಿಳಿಸಿವೆ.
ಜೆಪಿ ಮಾರ್ಗನ್, ಸಿಟಿ ಮತ್ತು ಡಾಯ್ಚ ಬ್ಯಾಂಕ್ ಅಂದಾಜಿನ ಪ್ರಕಾರ ಕಚ್ಚಾ ತೈಲ ಬೆಲೆ 120 ರಿಂದ 130 ಡಾಲರ್‌ಗಳಿಗೆ ಅಂದ್ರೆ ಅಂದಾಜು 10,389 ರೂ. ನಿಂದ 11,255 ರೂ. ವರೆಗೆ ಏರಿಕೆಯಾಗಲಿದೆ.
ಭಾರತದ 80% ರಷ್ಟು ಕಚ್ಚಾ ತೈಲ (Crude oil) ಆಮದು ಮಾಡಿಕೊಳ್ಳುತ್ತೆ. ಹಾರ್ಮೂಜ್ ಜಲಸಂಧಿ ಮಾರ್ಗದಿಂದಲೇ ಭಾರತಕ್ಕೆ ಆಮದು ಆಗಬೇಕು. ಭಾರತದಿಂದ ರಫ್ತಾಗುವ ಎಲ್ಲ ವಸ್ತುಗಳು ಸಹ ಈ ಜಲಸಂಧಿಯಿಂದಲೇ ಹೋಗಬೇಕು. ಈಗಾಗಲೇ ಆಮದು, ರಫ್ತು ಎರಡಲ್ಲೂ ಭಾರತಕ್ಕೆ ನಷ್ಟ ಶುರುವಾಗಿದೆ. ಒಂದು ವೇಳೆ ಜಲಸಂಧಿ ಬಂದ್ ಆದ್ರೆ ಭಾರತದ ಮೇಲೂ ಆರ್ಥಿಕ ಪರಿಣಾಮ ಬೀರಲಿದೆ ಎಂದು ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್ (SR Keshav) ಹೇಳಿದ್ದಾರೆ.