ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ಸ್ಟೈಲಿಶ್‌ ಲುಕ್ ವಿಷಯಕ್ಕೆ ಬಂದಾಗ ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಪ್ರತಿ ಬಾರಿಯೂ ಎಲ್ಲರ ಗಮನ ಸೆಳೆಯುತ್ತಾರೆ. ನಿನ್ನೆ ಬ್ಲ್ಯಾಕ್‌ ಮತ್ತು ಗೋಲ್ಡನ್‌ ಡಿಸೈನ್‌ನ ಲಾಂಗ್‌ ಗೌನ್‌ ಧರಿಸಿದ್ದ ಐಶ್‌ ಎರಡನೇ ಬಾರಿ ಬ್ಲೂ ಗ್ಲಿಟರಿಂಗ್ ಗೌನ್‌ನಲ್ಲಿ ಮಿಂಚಿದರು.

ವಿಶ್ವವಿಖ್ಯಾತ ಕೇನ್ಸ್ ಚಲನಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಸಹ ಬಾರಿಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡರು.

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ಸ್ಟೈಲಿಶ್‌ ಲುಕ್ ವಿಷಯಕ್ಕೆ ಬಂದಾಗ ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಪ್ರತಿ ಬಾರಿಯೂ ಎಲ್ಲರ ಗಮನ ಸೆಳೆಯುತ್ತಾರೆ. ಐಶ್ವರ್ಯಾ ರೈ ಬಚ್ಚನ್ ಶುಕ್ರವಾರ ಎರಡನೇ ಬಾರಿ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡರು.

ಅಮೇರಿಕನ್ ನಟಿ ಇವಾ ಲಾಂಗೋರಿಯಾ ಅವರೊಂದಿಗೆ ಸುಂದರವಾದ ಕ್ಷಣವನ್ನು ಹಂಚಿಕೊಂಡರು. ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಗೌನ್ ಇದಾಗಿದೆ. ಐಶ್‌ ಸ್ಟೈಲಿಶ್‌ ಗೌನ್‌ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಟೈಲಿಂಗ್ ಅನ್ನು ಟೀಕಿಸಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಅವರ ಕೇನ್ಸ್ ಪ್ರಯಾಣವು 2002 ರಲ್ಲಿ ಪ್ರಾರಂಭವಾಯಿತು, ಅವರು ತಮ್ಮ ಚಿತ್ರ ದೇವದಾಸ್‌ನ ಪ್ರಥಮ ಪ್ರದರ್ಶನಕ್ಕಾಗಿ ನೀತಾ ಲುಲ್ಲಾ ಸೀರೆ ಮತ್ತು ಭಾರೀ ಚಿನ್ನದ ಆಭರಣಗಳನ್ನು ಧರಿಸಿ ರೆಡ್ ಕಾರ್ಪೆಟ್‌ಗೆ ಪಾದಾರ್ಪಣೆ ಮಾಡಿದರು. ಆಕೆಯೊಂದಿಗೆ ದೇವದಾಸ್ ಸಹನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಹ ಇದ್ದರು. 

ಪ್ರತಿ ವರ್ಷವೂ ಐಶ್ವರ್ಯ ರೈ ತಮ್ಮ ಸ್ಟೈಲಿಶ್ ಡ್ರೆಸ್‌ ಧರಿಸಿ ಕೇನ್ಸ್‌ನಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳೂ ಹುಬ್ಬೇರಿಸುವಂತೆ ಮಾಡುತ್ತಾರೆ.