ನವದೆಹಲಿ: ಪತನಗೊಂಡ ಏರ್‌ ಇಂಡಿಯಾ (Air India) ವಿಮಾನದಲ್ಲಿ ಮಂಗಳೂರು ಮೂಲದ ಕ್ಲೈವ್ ಕುಂದರ್ (Clive Kunder) ಸಹ ಪೈಲಟ್‌ ಆಗಿದ್ದರು ಎಂಬ ವಿಚಾರ ಈಗ ತಿಳಿದು ಬಂದಿದೆ.

ಫೆಡರಲ್ ವಾಯುಯಾನ ನಿಯಮಗಳ ಪ್ರಕಾರ ಪ್ರಯಾಣಿಕ ಮತ್ತು ಸರಕು ವಿಮಾನಗಳ ಹಾರಾಟಕ್ಕೆ ಕನಿಷ್ಠ ಇಬ್ಬರು ಪೈಲಟ್‌ಗಳು ಇರಬೇಕು. ಇದನ್ನೂ ಓದಿ : ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

ಕ್ಲೈವ್ ಕುಂದರ್ ಮುಂಬೈನಲ್ಲಿ ನೆಲೆಸಿದ್ದು ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ತರಬೇತಿ ಪಡೆದಿದ್ದರು. ಒಟ್ಟು 1,100 ಗಂಟೆಗಳ ವಿಮಾನ ಹಾರಾಟದ ಅನುಭವವನ್ನು ಹೊಂದಿದ್ದರು.

ಕ್ಲೈವ್ ಕುಂದರ್ ಅವರು 8,200 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿರುವ ಅನುಭವಿ ಪೈಲಟ್‌ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ ಸಹಾಯ ಮಾಡುತ್ತಿದ್ದರು. ಇದನ್ನೂ ಓದಿ : ಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!

ಅಹಮದಾಬಾದ್‌ನಿಂದ ಲಂಡನ್‌ಗೆ ಮಧ್ಯಾಹ್ನ 1:39ಕ್ಕೆ ಟೇಕಾಫ್‌ ಆಗಿದ್ದ ಏರ್‌ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡು ಸಮೀಪದ ಮೇಘನಿ ನಗರದ ವಸತಿ ಪ್ರದೇಶದಲ್ಲಿವ ಮೆಡಿಕಲ್‌ ಹಾಸ್ಟೆಲ್‌ನ ಅಡುಗೆ ಮನೆ ಮೇಲೆ ಬಿದ್ದಿದೆ.

ಇಬ್ಬರು ಪೈಲಟ್‌, 10 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈಗಾಗಲೇ 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಿದೆ.

ಆಸ್ಪತ್ರೆಗೆ ಸೇರಿದ ಹಲವು ಮಂದಿಯ ಸ್ಥಿತಿ ಗಂಭೀರವಾಗಿದೆ. ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೆಲಿನ ಅಡುಗೆ ಮನೆ ಮೇಲೆ ಬಿದ್ದಿದೆ. ಮಧ್ಯಾಹ್ನ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲೇ  ಕಟ್ಡಡದ ಮೇಲೆ ಬಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.