ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು ಮಗಳಿಗೆ ಜನ್ಮ ನೀಡಿದ 6 ತಿಂಗಳ ನಂತರ ಮಗಳ ಮುಖ ರಿವೀಲ್ ಮಾಡಿದ್ದಾರೆ. ಮುದ್ದು ಮಗಳ ಫೋಟೋ ಹಂಚಿಕೊಂಡು ವಿಶೇಷವಾಗಿ ನಟಿ ಹಾರೈಸಿದ್ದಾರೆ.
ಅದಿತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿ 6 ತಿಂಗಳಾಗಿದೆ. ಇದೇ ಏ.4ರಂದು ಹೆಣ್ಣು ಮಗುವನ್ನು ನಟಿ ಬರಮಾಡಿಕೊಂಡಿದ್ದರು. ಈಗ ಮಗಳಿಗೆ (Daughter) ‘ನೇಸರ’ (Nesara) ಎಂದು ಮುದ್ದಾದ ಹೆಸರನಿಟ್ಟಿದ್ದಾರೆ. ನೇಸರ ಅಂದರೆ ಪ್ರಕೃತಿ ಎಂಬರ್ಥವಾಗಿದೆ.
ನಮ್ಮ ಬಾಳ ನೇಸರ. ಮುದ್ದು ಮಗಳೇ, ಇಂದಿಗೆ ನೀನು ನನ್ನ ಮಡಿಲನ್ನು ತುಂಬಿ ಆರು ತಿಂಗಳಾಯಿತು. ನೀನು ಬಂದಮೇಲೆ ನಮ್ಮ ಬದುಕೆ ಬದಲಾಯಿತು, ನಮ್ಮ ಜೀವನ ಸುಂದರವಾಯಿತು, ಸಂಪೂರ್ಣವಾಯಿತು ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೇಸರ ಎಂದು ನಟಿ ಹಾರೈಸಿದ್ದಾರೆ. ಕೆಂಪು ಬಣ್ಣದ ಡ್ರೆಸ್ ಧರಿಸಿರುವ ಮಗಳ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
ಅಂದಹಾಗೆ, ಬೆಂಗಳೂರಿನಲ್ಲಿ ಉದ್ಯಮಿ ಯಶಸ್ ಜೊತೆ 2022ರಲ್ಲಿ ಅದಿತಿ ಪ್ರಭುದೇವ ಮದುವೆಯಾದರು. ಗುರುಹಿರಿಯರು ನಿಶ್ಚಿಯಿಸಿದ ಹುಡುಗನನ್ನೇ ಮೆಚ್ಚಿ ನಟಿ ಮದುವೆಯಾದರು.