ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸುಜ್ಞಾನ ಬೇಸಿಗೆ” ಶಿಬಿರದ ಕೊನೆಯ ದಿನದ ಅಂಗವಾಗಿ ನರಹರಿ ಸದಾಶಿವ ದೇವಸ್ಥಾನಕ್ಕೆ 5, 6, 7 ತರಗತಿಯ ವಿದ್ಯಾರ್ಥಿಗಳಿಗೆ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.

ಆ ಪ್ರಯುಕ್ತ ಸಮಾರೋಪ ಸಮಾರಂಭವು ಪಾಣೆಮಂಗಳೂರಿನ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಮಾತನಾಡಿ‘ನಮ್ಮ ಸಂಸ್ಕೃತಿ, ಸಂಸ್ಕಾರ, ದಿನನಿತ್ಯದ ಚಟುವಟಿಕೆಯ ಜೊತೆಗೆ ಹಲವಾರು ಕೌಶಲ್ಯಗಳನ್ನು ಬೆಳೆಸಬೇಕು. ಆ ಬಗ್ಗೆ ಹೆಚ್ಚು ಅಧ್ಯಯನ ಮಾಡಿದಾಗ ಆಳವಾಗಿ ಅಧ್ಯಯನ ಮಾಡಲು ಸಾಧ್ಯ.ಭಯಂಕೇಶ್ವರ ಸದಾಶಿವ ದೇವಸ್ಥಾನದ ಮುಕ್ತೇಸರರು ಹಾಗೂ ಖ್ಯಾತ ಉದ್ಯಮಿಗಳಾದ ರಘುನಾಥ ಸೋಮಯಾಜಿ‘ನಮ್ಮ ವೇದವು ತಿಳಿಸುವ ಮಾತೃದೇವೋಭವ , ಪಿತೃದೇವೋಭವ , ಆಚಾರ್ಯ ದೇವೋಭವ, ಅತಿಥಿ ದೇವೋಭವ ಈ ನಾಲ್ಕು ವಿಷಯಗಳನ್ನು ಜೀವನದಲ್ಲಿ ನೆನಪಿಟ್ಟುಕೊಂಡು , ಜೀವನದಲ್ಲಿ ಆಳವಡಿಸಿಕೊಂಡಾಗ ನಾವು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲು ಸಾಧ್ಯ ‘ ಎಂದು ಮಕ್ಕಳಿಗೆ ಹಿತನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಜ್ಞಾನಪರಿಚಯ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜನ ಕಲ್ಯಾಣ ಸೇವಾ ಟ್ರಸ್ಟ್ ವತಿಯಿಂದ ರಾಮಗಿರಿ ನಾಟಿಯಲ್ಲಿ ನಡೆಯುವ ಸಂಸ್ಕೃತಿ ಶಿಕ್ಷಣ ಶಿಬಿರದ ಮಾಹಿತಿಯನ್ನುಕಮಲಾಕ್ಷ ಅವರು ವಿದ್ಯಾರ್ಥಿಗಳಿಗೆ ನೀಡಿದರು. ಧಾತ್ರಿ ಪ್ರೇರಣಾಗೀತೆ ಹಾಡಿದರು.

ವೇದಿಕೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್ , ಶೇಡಿಗುರಿ ಸರಸ್ವತಿ ಶಿಶುಮಂದಿರದ ಅಧ್ಯಕ್ಷರು ಜ್ಯೋತಿ ಬೀಡಿಯ ಮಾಲಕರು ಭಯಂಕೇಶ್ವರ ದೇವಸ್ಥಾನದ ಟ್ರಸ್ಟಿ ರಘು ಸಪಲ್ಯ ಮತ್ತು ಟ್ರಸ್ಟಿ ಇನ್ನೋರ್ವ ಸದಸ್ಯ ಕೃಷ್ಣಪ್ಪ , ಮುಖ್ಯಶಿಕ್ಷಕ ವಿರಾಜ್‌ ಕಣಂತೂರು ಉಪಸ್ಥಿತರಿದ್ದರು.

ಸುಶ್ಮಿತಾ ಭಟ್ ಸ್ವಾಗತಿಸಿ, ಶ್ರೇಯ ನಿರೂಪಿಸಿ, ಶಾನ್ವಿಕಾಮತ್ ವಂದಿಸಿದರು.