ಚಿಕ್ಕೋಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ J.P.Nadda ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಿತು.

ಬಿಜೆಪಿ ಪಕ್ಷದ ಆಧಾರ ಸ್ಥಂಭಗಳೇ ನಮ್ಮ ಬೂತ್ ಮಟ್ಟದ ಕಾರ್ಯಕರ್ತರು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಯೋಜನೆಗಳ ಫಲವನ್ನು ಪಡೆಯದ ಮನೆಗಳಿಲ್ಲ, ಪ್ರತಿ ಮನೆಗಳಲ್ಲೂ ಒಂದಿಲ್ಲೊಂದು ಮಹತ್ವದ ಯೋಜನೆಗಳು ತಲುಪಿವೆ, ಅವುಗಳನ್ನು ತಲುಪಿಸುವಲ್ಲಿ ಯಶಸ್ವೀ ಕೆಲಸ ಮಾಡಿದ ಕೀರ್ತಿ ಬೂತ್ ಮಟ್ಟದ ಕಾರ್ಯಕರ್ತರಿಗೆ ಸಲ್ಲುತ್ತದೆ.

ರಾಜ್ಯದಲ್ಲಿರುವ ಜನವಿರೋಧಿ, ರೈತ ವಿರೋಧಿ ಹಾಗೂ ರಾಷ್ಟ್ರವಿರೋಧಿ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಜನರ ಮುಂದಿಟ್ಟು, ನಮ್ಮ ಮೋದಿ ಜೀ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸಿ, ಬೂತ್ ಮಟ್ಟದಲ್ಲಿ ಈ ದಿನದಿಂದಲೇ ಒಂದೇ ಒಂದು ದಿನವೂ ವಿರಮಿಸದೇ ಚುನಾವಣೆ ಮುಗಿಯುವವರೆಗೂ ಸಮರ ಸೇನಾನಿಗಳಂತೆ ಕಾರ್ಯ ನಿರ್ವಹಿಸಲು ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಶ್ರೀ Dr. Radha Mohan Das Agrawal, ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಅಪ್ಪಾಜಿಗೋಳ್, ಸಂಸದರಾದ ಶ್ರೀ Annasaheb S. Jolle, ಲೋಕಸಭಾ ಪ್ರಭಾರಿ ಶ್ರೀ ಅಭಯ್ ಪಾಟೀಲ್, ಮಾಜಿ ಸಂಸದರಾದ ಶ್ರೀ ರಮೇಶ್ ಕತ್ತಿ, ಶಾಸಕರುಗಳಾದ ಶ್ರೀಮತಿ Shashikala Jolle , ಶ್ರೀ Duryodhan Aihole , ಶ್ರೀ Nikhil Umesh Katti, ವಿಧಾನ ಪರಿಷತ್ ಸದಸ್ಯರಾದ ಶ್ರೀ ಹನುಮಂತ್ ನಿರಾಣಿ, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.