ತಲೆಗೆ ಸಂಬಂಧಿಸಿದ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಹುಡುಗಿಗೆ ಬೇಕಿದೆ ಸಹಾಯದ ಹಸ್ತ

ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕೊಠರಿ ಕಟ್ಟೆ ಹರೀಶ್ ಶೆಟ್ಟಿ ಮತ್ತು ಪುಷ್ಪಾವತಿ ಎಂಬವರ ಪುತ್ರಿ ತ್ರಿಷಾ ತಲೆಗೆ ಸಂಬಂಧಿಸಿದ ಖಾಯಿಲೆಗೆ ತುತ್ತಾಗಿ ಚಿಂತಾಜನಕ ಸ್ಥಿತಿಯಲ್ಲಿರುತ್ತಾರೆ. ಹರೀಶ್ ಶೆಟ್ಟಿರವರು ಚಾಲಕನಾಗಿ ದುಡಿಯುತ್ತಿದ್ದು, ತೀರಾ ಬಡತನದ ಕುಟುಂಬವಾಗಿದ್ದು, ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುತ್ತದೆ. ಮಗಳ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಇದ್ದು, ಹಣ ಹೊಂದಿಸಲು ಬಹಳ ಕಷ್ಟ ಪಡುತ್ತಿದ್ದಾರೆ. ಮಗಳಿಗೆ ತುರ್ತಾಗಿ ಚಿಕಿತ್ಸೆಯ ಅವಶ್ಯಕತೆ ಇದ್ದು ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ ಬಡ ಕುಟುಂಬ.

ಸಹೃದಯಿಗಳಾದ ತಾವೆಲ್ಲರೂ ಬಡ ಮಗುವಿನ ಚಿಕಿತ್ಸೆಗೆ ಕೈ ಜೋಡಿಸುವಂತೆ ವಿನಂತಿ.
ಸಹಾಯ ಮಾಡಲು ಇಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸ ಬೇಕಾಗಿ ವಿನಂತಿ.
Account holder Name : Pushpavathi
Bank Name: Bank of Baroda, Vittla Branch
Account number: 83730100007622
IFSC code: BARB0VJVITL