ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಬಿ ಸಿ ರೋಡ್ ವಲಯದ ವತಿಯಿಂದ ಗಾಣದಕೋಡಿ ಕುಟುಂಬ ಚಾವಡಿಯಲ್ಲಿ ಭಜನಾ ತರಬೇತಿ ಶಿಬಿರ
ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಬಿ ಸಿ ರೋಡ್ ವಲಯದ ವತಿಯಿಂದ ಒಂದು ವಾರದ ಭಜನಾ ತರಬೇತಿ ಶಿಬಿರ ಬಂಟ್ವಾಳ ತಾಲೂಕಿನ ಬಂಟ್ವಾಳ ಮೂಡ ಗ್ರಾಮದ ಗಾಣದಕೋಡಿ ಕುಟುಂಬ ಚಾವಡಿಯಲ್ಲಿ ರವಿವಾರ ಆರಂಭಿಸಲಾಯಿತು .
ಬಂಟ್ವಾಳ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಸಂದರ್ಭದಲ್ಲಿ , ಬಂಟ್ವಾಳ ಜನಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ರೋನಾಲ್ಡ್ ಡಿ’ ಸೋಜ, ಗ್ರಾಮಾಭಿವೃದ್ಧಿಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ,,ಭಜನಾ ಪರಿಷತ್ ಜಿಲ್ಲಾ ಸಮನ್ವಯ ಧಿಕಾರಿ ಸಂತೋಷ್ ಪಿ ಅಳಿಯೂರು,ಬಿ ಸಿ ರೋಡ್ ವಲಯದ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಶೇಖರ್ ಸಾಮಾನಿ, ಫೋಟೋ ಗ್ರಾಪರ್ಸ್ ಅಶೋಶಿಯೇಷನ್ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಭಜನಾ ತರಬೇತಿದಾರ ಸಂದೇಶ್, ಗಾಣದಕೋಡಿ ಕುಟುಂಬ ಚಾವಡಿ ಸದಸ್ಯ ದಿನೇಶ್ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.
ರಂಜಿತಾ ಪ್ರಾರ್ಥಿಸಿ, ಬಿ ಮೂಡ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿ, ಭಾರತಿ ಹರೀಶ್ ಗಾಂದೋಡಿ ವಂದಿಸಿದರು. ಬಿ ಸಿ ರೋಡ್ ವಲಯ ಮೇಲ್ವಿಚಾರಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.