ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ಸಹಾನುಭೂತಿ, ನಮ್ರತೆ ಮತ್ತು ಆಧ್ಯಾತ್ಮಿಕ ಸ್ಥೈರ್ಯದ ದಾರಿದೀಪ ಎಂದು ಶ್ಲಾಘಿಸಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಪೂಜ್ಯ ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ನೋವಾಗಿದೆ. ಈ ದುಃಖದ ಸಮಯದಲ್ಲಿ ಅವರನ್ನು ಸ್ಮರಿಸುತ್ತಾ ಜಾಗತಿಕ ಕ್ಯಾಥೊಲಿಕ್ ಸಮುದಾಯಕ್ಕೆ ನನ್ನ ಸಂತಾಪಗಳು. ಪೋಪ್ ಫ್ರಾನ್ಸಿಸ್ ಅವರನ್ನು ಜಗತ್ತಿನಾದ್ಯಂತದ ಸಹಸ್ರಾರು ಜನರು ಸಹಾನುಭೂತಿ, ನಮ್ರತೆ ಮತ್ತು ಆಧ್ಯಾತ್ಮಿಕ ಸ್ಥೈರ್ಯದ ದಾರಿದೀಪವಾಗಿ ಸ್ಮರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಅವರು ಏಸುಕ್ರಿಸ್ತರ ಆದರ್ಶಗಳನ್ನು ಅರಿತುಕೊಳ್ಳಲು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಅವರು ಶ್ರದ್ಧೆಯಿಂದ ಬಡವರು ಮತ್ತು ದೀನದಲಿತರ ಸೇವೆ ಮಾಡಿದರು. ಅಲ್ಲದೇ ನೊಂದವರಿಗೆ ಭರವಸೆಯ ಚೇತನವಾಗಿದ್ದರು.
ಅವರನ್ನು ಭೇಟಿ ಮಾಡಿದ ಕ್ಷಣಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅವರಿಂದ ನಾನು ಬಹುವಾಗಿ ಪ್ರೇರಿತನಾಗಿದ್ದೇನೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.”