ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಮೆಗಾ ಜುಮೋಯಿರ್ ಕಾರ್ಯಕ್ರಮವಾದ ಜುಮೋಯಿರ್ ಬಿನಂದಿನಿ 2025 ರಲ್ಲಿ ಭಾಗವಹಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಚೈತನ್ಯ, ಉತ್ಸಾಹ ಮತ್ತು ಉಲ್ಲಾಸದಿಂದ ತುಂಬಿದ ವಾತಾವರಣವಿತ್ತು ಎಂದು ಹೇಳಿದರು. ಝುಮೋಯಿರ್ ನ ಎಲ್ಲಾ ಕಲಾವಿದರು ಮಾಡಿದ ಅದ್ಭುತವಾದ ಸಿದ್ಧತೆಗಳು ಚಹಾ ತೋಟಗಳ ಪರಿಮಳ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಜನರು ಝುಮರ್ ಮತ್ತು ಚಹಾ ತೋಟ ಸಂಸ್ಕೃತಿಯೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವಂತೆಯೇ, ತಾವೂ ಕೂಡ ಇದೇ ರೀತಿಯ ಸಂಪರ್ಕವನ್ನು ಹೊಂದಿರುವುದಾಗಿ ಅವರು ಹೇಳಿದರು. ಇಂದು ಜುಮೋಯಿರ್ ನೃತ್ಯವನ್ನು ಪ್ರದರ್ಶಿಸುವ ಇಷ್ಟು ದೊಡ್ಡ ಸಂಖ್ಯೆಯ ಕಲಾವಿದರು ದಾಖಲೆಯನ್ನು ಸ್ಥಾಪಿಸುತ್ತಾರೆ ಎಂದು ಅವರು ಹೇಳಿದರ.
ಇಂತಹ ಅದ್ದೂರಿ ಕಾರ್ಯಕ್ರಮಗಳು ಅಸ್ಸಾಂನ ಹೆಮ್ಮೆಗೆ ಸಾಕ್ಷಿಯಾಗುವುದಲ್ಲದೆ, ಭಾರತದ ಮಹಾನ್ ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮೊದಲು ಅಭಿವೃದ್ಧಿ ಮತ್ತು ಸಂಸ್ಕೃತಿಯ ವಿಷಯದಲ್ಲಿ ಅಸ್ಸಾಂ ಮತ್ತು ಈಶಾನ್ಯವನ್ನು ನಿರ್ಲಕ್ಷಿಸಿದ ಸಮಯವಿತ್ತು ಎಂದು ಹೇಳಿದರು. ಅಸ್ಸಾಂನ ಹೆಮ್ಮೆಯಾಗಿದ್ದ ಮತ್ತು ಅಸ್ಸಾಂನ ಸಂಸ್ಕೃತಿ ಮತ್ತು ಗುರುತನ್ನು ಮೊಘಲರಿಂದ ರಕ್ಷಿಸಿದ ಧೈರ್ಯಶಾಲಿ ಯೋಧ ಲಚಿತ್ ಬೋರ್ಫುಕನ್ ಬಗ್ಗೆ ಮಾತನಾಡಿದ ಶ್ರೀ ಮೋದಿಯವರು, ಲಚಿತ್ ಬೋರ್ಫುಕನ್ ಅವರ 400 ನೇ ಜನ್ಮ ವಾರ್ಷಿಕೋತ್ಸವದಂದು ಆಯೋಜಿಸಲಾದ ಭವ್ಯ ಆಚರಣೆಗಳನ್ನು ಎತ್ತಿ ತೋರಿಸಿದರು ಮತ್ತು ಆ ಸಮಯದಲ್ಲಿ ಅವರ ಟ್ಯಾಬ್ಲೋವನ್ನು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೇರಿಸಲಾಗಿತ್ತು ಎಂದು ತಿಳಿಸಿದರು.
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಡಾ. ಎಸ್ ಜೈಶಂಕರ್, ಶ್ರೀ ಸರ್ಬಾನಂದ ಸೋನೋವಾಲ್, ತ್ರಿಪುರಾ ಮುಖ್ಯಮಂತ್ರಿ, ಡಾ. ಮಾಣಿಕ್ ಸಹಾ, ಕೇಂದ್ರ ರಾಜ್ಯ ಸಚಿವರಾದ ಶ್ರೀ ಪಬಿತ್ರಾ ಮಾರ್ಗರಿಟಾ, ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.