ಬಂಟ್ವಾಳ: ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರುಫಾರ್ಮ್ಸ್ ಬಳಿ ಇರುವ ಸಿ‌ಎನ್.ಜಿ.ಘಟಕಕ್ಕೆ ಭೇಟಿ ನೀಡಿದರು.

ಸಚಿವ ಪ್ರಹ್ಲಾದ ಜೋಶಿ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರುಫಾರ್ಮ್ಸ್ ಬಳಿ ಇರುವ ಸಿ‌ಎನ್.ಜಿ.ಘಟಕಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಘಟಕದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ ಅವರು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಇಂತಹ ಪ್ರಯತ್ನಗಳು ಸಹಕಾರಿ ಆಗುತ್ತದೆ ಎಂದರು.ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ರಾಜೇಶ್ ನಾಯ್ಕ್ ಹಾಗೂ ಉನ್ನತ್ ಆರ್.ನಾಯ್ಕ್ ಘಟಕದಲ್ಲಿ ಅಟೋ ಗ್ಯಾಸ್ ಪ್ರಾಯೋಗಿಕ ವಿತರಣೆಗೆ ಅನುಕೂಲ ಕಲ್ಪಿಸಲಾಗಿರುವ ಬಗ್ಗೆ ಮಾಹಿತಿ ನೀಡಿದರು.

ಶಾಸಕ ರಾಜೇಶ್ ನಾಯ್ಕ್ ಹಾಗೂ ಉನ್ನತ್ ಆರ್.ನಾಯ್ಕ್ ಘಟಕದಲ್ಲಿ ಅಟೋ ಗ್ಯಾಸ್ ಪ್ರಾಯೋಗಿಕ ವಿತರಣೆಗೆ ಅನುಕೂಲ ಕಲ್ಪಿಸಲಾಗಿರುವ ಬಗ್ಗೆ ಮಾಹಿತಿ ನೀಡಿದರು.

‌‌ಈ ಸಂದರ್ಭದಲ್ಲಿ ದ.ಕ‌.ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಮಂಗಳೂರು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಸಂಜಯ್ ಪ್ರಭು, ದೇವದಾಸ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯತೀಶ್ ಅರ್ವಾರ್, ಸಚಿನ್ ಅಡಪ, ಪವನ್ ಕುಮಾರ್, ರವೀಶ್ ಕಾಮತ್, ಮತ್ತಿತರರು ಉಪಸ್ಥಿತರಿದ್ದರು.