ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಘಟಕ ಶಂಬೂರ್ ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಶಂಭೂರು ನಲ್ಲಿ ಜರಗಿದ ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸ್ವಯಂ ಸೇವಾ ಕೆಲಸದಲ್ಲಿ ಎಲ್ಲರ ಗಮನ ಸೆಲೆಯಿತು. ಅಚ್ಚು ಕಟ್ಟಾದ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ತಮಗೆ ನೀಡಿದ ಅತಿಥಿ ಸತ್ಕಾರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಪ್ರಸಂಶಕ್ಕೆ ಪಾತ್ರರಾಗಿದ್ದಾರೆ.

ಶೌರ್ಯತಂಡದ ಸಂಯೋಜಕಿ ಲಕ್ಷ್ಮಿ, ಘಟಕ ಪ್ರತಿನಿಧಿ ಕೃಷ್ಣಪ್ಪ ನಾಯ್ಕ, ಸದಸ್ಯರಾದ ವಾಮನ ಕುಲಾಲ್, ಪುರುಷೋತ್ತಮ್ ಬಂಗೇರ, ಪ್ರಕಾಶ್ ಎಂ. ಪ್ರಕಾಶ್ ನಾಟಿ, ಹರೀಶ್ ವಿಠಲ್, ಉಮೇಶ್ , ಪ್ರೇಮಲತಾ ಅಕ್ಕಮ್ಮ , ಗೀತಾ, ಶ್ರೀಮತಿ ಮೊದಲಾದವರು  ಸ್ವಯಂ ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಶೌರ್ಯ ತಂಡದ ಸೇವೆಯನ್ನು ಗುರುತಿಸಿ ಅಭಿನಂದಿಸಲಾಯಿತು.