ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ತಾಲೂಕಿನ ನಾರ್ಶ ಮೈದಾನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಸಹಯೋಗದಲ್ಲಿ ಮಂಚಿ ಮತ್ತು ಕೊಳ್ನಾಡು ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಸಾಹಿತ್ಯಾಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಒಂದು ದಿನದ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟವನ್ನು ನಡೆಯಿತು.
ನಾರ್ಶಮೈದಾನ ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಕಮ್ಮಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಅಧ್ಯಕ್ಷತೆ ವಹಿಸಿ ಸಾಹಿತ್ಯವು ಮಕ್ಕಳ ಬದುಕನ್ನು ಭವ್ಯಗೊಳಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ನಾರ್ಶ ಮೈದಾನ ಪ್ರೌಢ ಶಾಲಾ ಹಿಂದಿ ಶಿಕ್ಷಕಿ ಭಾರತಿ ಸಿ, ಮಕ್ಕಳ ಕಲಾಲೋಕದ ಗೌರವ ಸಲಹೆಗಾರ ಭಾಸ್ಕರ ಅಡ್ವಳ ಸಹಕರಿಸಿದರು
ಮಂಚಿ ಸಿ.ಆರ್.ಪಿ ಇಂದಿರಾ ನಾರ್ಶಮೈದಾನ ಶಾಲಾ ಮುಖ್ಯ ಶಿಕ್ಷಕ ಶಂಕರ್ ಪಿ., ದೈಹಿಕ ಶಿಕ್ಷಕ ಅಬ್ದುಲ್ ರಫೀಕ್, ಶಿಕ್ಷಕರಾದ ಶರತ್, ಕ್ಷಮಾ, ಶುಭ,ಮಂಚಿ ಕುಕ್ಕಾಜೆ ಶಾಲೆಯ ಅಧ್ಯಾಪಕಿ ಶೈಲಜಾ ಎಸ್.ಬಿ, ಕಾಡು ಮಠ ಶಾಲೆಯ ಅಧ್ಯಾಪಕಿ ಪುಷ್ಪಾವತಿ, ಸೆರ್ಕಳ ಶಾಲೆಯ ಮು.ಶಿ. ದಾಮೋದರ, ಮೋಂತಿಮಾರು ಶಾಲೆಯ ಶಿಕ್ಷಕಿ ರೇಖಾ ಕೆ., ಉಪಸ್ಥಿತರಿದ್ದರು.
.
ಕಮ್ಮಟದಲ್ಲಿ ವಿವಿಧ ಶಾಲೆಗಳ 41 ವಿದ್ಯಾರ್ಥಿಗಳು ಭಾಗವಹಿಸಿದರು. ಅಪರಾಹ್ನ ಜರಗಿದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಕಮ್ಮಟದ ಸ್ವರಚನೆಗಳ ಹಸ್ತ ಪತ್ರಿಕೆಯನ್ನು ನಾರ್ಶ ಮೈದಾನ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ನೇರಳಕಟ್ಟೆ ಅನಾವರಣಗೊಳಿಸಿದರು.
ವಿದ್ಯಾರ್ಥಿಗಳು ಕಮ್ಮಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳ ಕಲಾ ಲೋಕದ ಕಾರ್ಯದರ್ಶಿ ಪುಷ್ಪಾ ಎಚ್ ಸ್ವಾಗತಿಸಿ ನಿರೂಪಿಸಿದರು. ಅಧ್ಯಕ್ಷರಾದ ರಮೇಶ ಎಂ. ಬಾಯಾರು ವಂದಿಸಿದರು.