ಒಟ್ಟಾವಾ: ಕೆನಡಾದ (Canada) ಟೊರೊಂಟೊ ಬಳಿ ಡಿವೈಡರ್‌ಗೆ ಟೆಸ್ಲಾ ಕಾರು (Tesla Car) ಡಿಕ್ಕಿ (Accident) ಹೊಡೆದು ಬೆಂಕಿ ಹೊತ್ತಿ ಉರಿದ ಪರಿಣಾಮ ನಾಲ್ವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಯಾಣಿಸುತ್ತಿದ್ದ ಟೆಸ್ಲಾ ಸ್ವಯಂ ಚಾಲನಾ ಮಾದರಿಯದ್ದೇ ಎಂಬುದು ತಿಳಿದು ಬಂದಿಲ್ಲ.
ಮೃತಪಟ್ಟವರನ್ನು ಗುಜರಾತ್‌ನ (Gujarat) ಗೋಧ್ರಾ ಮೂಲದ ಕೇತಾ ಗೋಹಿಲ್ (30) ಮತ್ತು ನಿಲ್ ಗೋಹಿಲ್ (26) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇವರ ಇಬ್ಬರು ಸ್ನೇಹಿತರು ಸಹ ಸಾವಿಗೀಡಾಗಿದ್ದಾರೆ. ಕಾರಿನಲಿದ್ದ ಓರ್ವ ಮಹಿಳೆಯನ್ನು ಬೇರೆ ವಾಹನದಲ್ಲಿದ್ದ ಪ್ರಯಾಣಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ದಾವಣಗೆರೆ | ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಹೋಗಿದ್ದ ವ್ಯಕ್ತಿ ನೀರು ಪಾಲು
ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸಲು ಹಲವಾರು ಜನ ತಮ್ಮ ಕಾರುಗಳು ನಿಲ್ಲಿಸಿ ಅಪಘಾತಕ್ಕೀಡಾದ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಅಷ್ಟರಲ್ಲಾಗಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷದ ಜುಲೈನಲ್ಲಿ ಕೆನಡಾದಲ್ಲಿ ಪಂಜಾಬ್‌ನ ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿಯಿಂದ ಆಚೆಗೆ ಪಲ್ಟಿಯಾಗಿ ಸಾವನ್ನಪ್ಪಿದರು.