ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಘಟಕ ಶಂಭೂರು ಇದರ ಮಾಸಿಕ ಸಭೆ ಹಾಗೂ ಶ್ರಮದಾನ ದಿನಾಂಕ 20-10-2024 ರಂದು ಜರಗಿತು.

ಮಾಸಿಕ ಸಭೆಯು ಶಂಭೂರು ಗ್ರಾಮದ ಬೈಪಾಡಿ ಕೃಷ್ಣಪ್ಪ ನಾಯ್ಕರವರ ಮನೆಯಲ್ಲಿ ವಲಯ ಮೇಲ್ವಿಚಾರಕಿ ಅಮಿತಾ ರವರ ಉಪಸ್ಥಿತಿಯಲ್ಲಿ ನಡೆಸಿ ಘಟಕದ ಜವಾಬ್ದಾರಿಯ ಬಗ್ಗೆ ಮೇಲ್ವಿಚಾರಕರು ಮಾಹಿತಿ ನೀಡಿದರು.

ತದನಂತರ ಘಟಕದ ಸದಸ್ಯರು ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿ ಗುರಿಯಿಂದ ನಾಟಿಯವರಿಗೆ ಮಾರ್ಗದ ಬದಿಯಲ್ಲಿ ಬೆಳೆದ ಬಲ್ಲೆ, ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭ ಜನಜಾಗೃತಿ ವಲಯ ಸದಸ್ಯರಾದ ಪುರುಷೋತ್ತಮ್, ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ಎಂ. ಮಡಿಮುಗೇರು, ಘಟಕದ ಪ್ರತಿನಿಧಿ ಕೃಷ್ಣಪ್ಪ ನಾಯ್ಕ್, ಸಂಯೋಜಕಿ ಲಕ್ಷ್ಮೀ, ಘಟಕದ ಸದಸ್ಯರುಗಳಾದ ವಾಮನ, ಸುರೇಶ್, ಹರೀಶ್, ಪ್ರಕಾಶ್, ಸನತ್, ಶಿವಶಂಕರ್, ಪ್ರೇಮಲತಾ, ಬಬಿತ, ಅಕ್ಕಮ್ಮ, ಗೀತಾ, ಶ್ರೀಮತಿ, ಪುರುಷೋತ್ತಮ  ಉಪಸ್ಥಿತರಿದ್ದರು.