ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಪುಂಜಾಲಕಟ್ಟೆ ವಲಯದ ಕರ್ಲ ಕಾರ್ಯಕ್ಷೇತ್ರದ ಮಹಾದೇವ ದೇವೇಶ್ವರ ಸಂಘದ ದಯಾನಂದ ಅವರ ಮನೆಗೆ ಹಾಗೂ ಕೊರಗಪ್ಪ ಅವರ ಮನೆಗೆ ತೀವ್ರ ಮಳೆಯಿಂದ ಗುಡ್ಡ ಕುಸಿದು ಬಿದ್ದು ಹಾನಿಯಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ಸಹಾಯಧನ ಮಂಜೂರಾಗಿದು ಅದರ ಚೆಕ್ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ವಲಯ ಮೇಲ್ವಿಚಾರಕಿ ಸವಿತಾ,ಒಕ್ಕೂಟದ ಪದಾಧಿಕಾರಿ ಕವಿತಾ, ಸೇವಾಪ್ರತಿನಿಧಿ ಉಷಾ, ಉಪಸ್ಥಿತರಿದ್ದರು.