ಭತ್ತದ ಕೃಷಿ ಲಾಭದಾಯಕವಲ್ಲದಿದ್ದರೂ ಗದ್ದೆಯನ್ನು ಹಡಿಲು ಬಿಡದೆ ಸಾಗುವಳಿ ಮಾಡುವುದು ಸವಾಲಿನ ಸಂಗತಿ. ಆದರೂ ಯಂತ್ರಗಳನ್ನು ಹಾಗು ಮೇಲ್ಭಾಗಕ್ಕೆ ನೆಟ್ ಬಳಸಿಕೊಂಡು ಸಾಗುವಳಿ ಮಾಡಬಹುದು ಕೃಷಿಕರು ತಮ್ಮ ಉಪಯೋಗಕ್ಕಾಗಿಯಾದರೂ ಭತ್ತದ ಕೃಷಿ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಪಿಂಗಾರ ರೈತ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾದ ರಾಮಕಿಶೋರ್ ತಿಳಿಸಿದರು.
ಸಜೀಪ ಮೂಡ ಗ್ರಾಮದ ಕೋಮಾಲಿ ಪಡೀಲು ಪುರುಷೋತ್ತಮ ಪೂಜಾರಿ ಯವರ ಮನೆಯಲ್ಲಿ ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ ಪ್ರಾಂತ 3 ವಲಯ 2ರ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ವತಿಯಿಂದ ಜರುಗಿದ ಭತ್ತದ ಕೃಷಿ ಹಾಗು ತರಕಾರಿ ಕೃಷಿ ಇವರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಲಯನ್ ಡಾ.ಗೋಪಾಲ ಆಚಾರ್ ಮಾತನಾಡಿದರು.
ವಲಯಾಧ್ಯಕ್ಷರಾದ ಲಯನ್ ಸಂದೇಶ ಶೆಟ್ಟಿ ಬಿಕ್ನಾಜೆ ಕ್ಲಬ್ಬಿನ ಕೋಶಾಧಿಕಾರಿ ಚಿತ್ತರಂಜನ್ ಕರೈ ಮುಡಿಪು ಕುರ್ನಾಡು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶಿವರಾಮ ರೈ ಮೇರಾವು ವೇದಿಕೆಯಲ್ಲಿ ಉಪಸ್ತಿತರಿದ್ದರು.
ಇದೇ ಸಂದರ್ಭ ಪುರುಷೋತ್ತಮ ಪೂಜಾರಿ ಹಾಗು ಅವರ ಪತ್ನಿ ಸುಮಿತ್ರಾ ರವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ಬಿನ ಸದಸ್ಯರುಗಳಾದ ಉಮನಾಥ ರೈ ಮೇರಾವು, ರಾಮಣ್ಣ ಶೆಟ್ಟಿ, ಬಾಲಕೃಷ್ಣ ಸೆರ್ಕಲ, ಸಂತೋಷ ಡಿ.ಸೋಜ ,ಬಾಲಕೃಷ್ಣ ಶೆಟ್ಟಿ , ರವೀಂದ್ರ ಕುಕ್ಕಾಜೆ, ನಿಶ್ಚಲ್ ಜಿ ಶೆಟ್ಟಿ , ಪುರುಷೋತ್ತಮ ಸ್ಥಾನಮೂಲ, ಶಿವಶಂಕರ್ ರಾವ್, ಅರುಣ್ ಡಿ.ಕುನ್ಹ, ಶ್ರೀಮತಿ ಶರ್ಮಿಳ, ಶ್ರೀಮತಿ ದೀಪಾ ಶೆಟ್ಟಿ . ಸ್ಥಳೀಯರಾದ ಕೇಶವ ಶೆಟ್ಟಿ ಮೇರಾವು, ಕೃಷ್ಣರಾಜ ನಾಯಕ್ ನಿರ್ಬೈಲು, ಪೂವಪ್ಪ ಪೂಜಾರಿ ಕೋಮಾಲಿ ನಾರಾಯಣ ನಾಯ್ಕ ಕಜೆ ,ಸತೀಶ್ ಕಜೆ ಮತ್ತು ಪತ್ರಿಕಾ ವಿತರಕರಾದ ಪುಷ್ಪರಾಜ ಕಜೆ ಭಾಗವಹಿದ್ದರು.
ಲಯನ್ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಲಯನ್ ರಾಮಪ್ರಸಾದ್ ರೈ ವಂದಿಸಿದರು, ಲಯನ್ ಜಯಪ್ರಕಾಶ ರೈ ಮೇರಾವು ಕಾರ್ಯಕ್ರಮವನ್ನು ಸಂಘಟಿಸಿದರು.