ಯೆನೆಪೋಯ ಮೊಯ್ದೀನ್ ಕುಂಞ್ಞ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್, ಜೆಪ್ಪಿನಮೊಗರು, ಮಂಗಳೂರು, ಇವರು ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆ ಹಾಗೂ ನಾವೀನ್ಯತೆಗಳನ್ನು ಪ್ರೋತ್ಸಾಹಿಸಲು ಯೆನೆಪೋಯ ಶಿಕ್ಷಕ ಪ್ರಶಸ್ತಿ-2024 ಅನ್ನು ಪ್ರಕಟಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು, ಕಲೆ ಮತ್ತು ಕರಕುಶಲ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಪದವಿಪೂರ್ವ ವಿಶ್ವವಿದ್ಯಾಲಯದ ಶಿಕ್ಷಕರು, ಮುಖ್ಯೋಪಾಧ್ಯಾಯರು. ರಾಜ್ಯ/ಕೇಂದ್ರ ಅಥವಾ ಖಾಸಗಿ ಶಾಲಾ ಯೋಜನೆಯಡಿಯಲ್ಲಿ ಯಾವುದೇ ಸರಕಾರಿ/ ಅನುದಾನಿತ/ ಅನುದಾನರಹಿತ/ ಸಂಸ್ಥೆಯ ಪ್ರಾಂಶುಪಾಲರು ಇವರು ಅರ್ಹರು.
ಈ ಶಿಕ್ಷಕ ಪ್ರಶಸ್ತಿಗೆ ಅರ್ಹರಾದವರಿಗೆ ರೂಪಾಯಿ 15000/-ವನ್ನು ನವೆಂಬರ್ 14, 2024ರಂದು ಸ್ಥಾಪಕರ ದಿನದಂದು ಸನ್ಮಾನಿಸಿ ಹಸ್ತಾಂತರಿಸಲಾಗುವುದು.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು:
೧. ಅರ್ಜಿದಾರರು 10 ವರ್ಷಗಳ ಬೋಧನಾ ಸೇವೆಯನ್ನು ಪೂರ್ಣಗೊಳಿಸಿರಬೇಕು.
೨. ಅವರು ಶಿಕ್ಷಣ ಕ್ಷೇತ್ರದಲ್ಲಿ ಅರ್ಹತೆ ಮತ್ತು ಶ್ರೇಷ್ಠತೆಯ ದಾಖಲೆಯನ್ನು ಸಾಬೀತುಪಡಿಸಿರಬೇಕು.
ವಾರ್ಷಿಕ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲು ಟ್ರಸ್ಟ್ನಿಂದ ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಕರು ರ್ಜಿ ನಮೂನೆಯನ್ನು ಸಂಸ್ಥೆಯ ಮುಖ್ಯಸ್ಥರು / ಕ್ಷೇತ್ರಶಿಕ್ಷಣಾಧಿಕಾರಿ ಇವರಿಂದ ದೃಢೀಕರಿಸಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಗಡುವಿನೊಳಗೆ ಅಥವಾ ಮೊದಲು ಸಲ್ಲಿಸಬೇಕು. ಅರ್ಜಿದಾರರು ದಾಖಲೆಯ ಮುದ್ರಿತ ಪ್ರತಿಯನ್ನು ಶಾಲಾ ಕಛೇರಿಗೆ ಬಂದು ಸಲ್ಲಿಸಬಹುದು ಅಥವಾ. tys@yenepoya.edu.in / programmecommittee.tys@yenepoya.edu.in ಗೆ ಇ-ಮೇಲ್ ಮಾಡಬಹುದು
ಅರ್ಜಿ ನಮೂನೆಗಳು ಯೆನೆಪೊಯ ಶಾಲಾ ಕಚೇರಿಯಲ್ಲಿ ಲಭ್ಯವಿದೆ. ಮುದ್ರಿತ ಪ್ರತಿಯನ್ನು ಸಂಗ್ರಹಿಸಲು ಬರಲು ಸಾಧ್ಯವಾಗದ ಆಸಕ್ತ ಅರ್ಜಿದಾರರಿಗೆ ಫರ್ಮ್ ಅನ್ನು ಇ-ಮೇಲ್ ಮೂಲಕ ಕಳುಹಿಸಲಾಗುವುದು. ಪೂರ್ಣಗೊಂಡ ಫಾರಂಳನ್ನು ಕೊನೆಯ ದಿನಾಂಕದಂದು ಅಥವಾ ಮೊದಲು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ ೩೧, ೨೦೨೪. ಯಾವುದೇ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಯೆನೆಪೊಯ ಶಾಲೆ, ಜೆಪ್ಪಿನಮೊಗರು, ಮಂಗಳೂರು ಇಲ್ಲಿ ಸಂರ್ಕಿಸಿ.(0824-2241846 / 9945922705 / 82173 92045).
ವಂದನೆಗಳೊಂದಿಗೆ
ಸಹಾಯಕ ನಿರ್ದೇಶಕರು
ಯೆನೆಪೋಯ ಶಾಲೆ, ಜಪ್ಪಿನಮೊಗರು
ಮಂಗಳೂರು