ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ನಮ್ಮ ನೆಚ್ಚಿನ ಪ್ರಧಾನಮಂತ್ರಿಯಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ 74 ನೇ ಯ ಜನ್ಮದಿನದ ಪ್ರಯುಕ್ತ ಸೇವಾ ಚಟುವಟಿಕೆಯ ಅಂಗವಾಗಿ ಪೊಳಲಿ ಶ್ರೀ ರಾಮಕೃಷ್ಣ ಶಾಖ ಮಠದ ಪೊಳಲಿ ತಪೋವನದ ಮಕ್ಕಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಠದ ಸ್ವಾಮೀಜಿಯಾದ ವಿವೇಕ ಚೈತಾನಂದ ಸ್ವಾಮೀಜಿ ಅವರು ಸನ್ಮಾನ್ಯ ಮೋದಿಜಿ ಅವರ ಸಾಧನೆ ಹಾಗೂ ಅವರ ಕಾರ್ಯ ವೈಖರಿ ಬಗ್ಗೆ ಗುಣಗಾನ ಮಾಡಿದರು. ದೇವರು ಅವರಿಗೆ ಉತ್ತಮ ಆರೋಗ್ಯ ಆಯುಷ್ಯ ಕರುಣಿಸಿ ಅವರು ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀ ಸವಿತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಹರ್ಷಿಣಿ ಪುಷ್ಪಾನಂದ ಮತ್ತು ಪ್ರಮೀಳಾ ಗಣೇಶ್, ಜಿಲ್ಲೆಯ ಮಹಿಳಾ ಮೋರ್ಚಾದ ಪ್ರಭಾರಿಯದ ಸುಮಾ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಲಕಿತ ಆರ್ ಶೆಟ್ಟಿ, ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ರೂಪ ಶೆಟ್ಟಿ, ಕಾರ್ಯದರ್ಶಿಯಾದ ಚಂದ್ರಾವತಿ ಪೊಳಲಿ, ಮಹಿಳಾ ಮೋರ್ಚಾ ದ ಸದಸ್ಯರಾದ ಶ್ರೀಮತಿ ರಜನಿ, ಸಜಿಪ ಮುನ್ನೂರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟೇಶ್ ನಾವೂಡ, ರೈತ ಮೋರ್ಚಾದ ಸದಸ್ಯ ರಾದ ಯಶೋದರ್ ಪೊಳಲಿ, ಪೊಳಲಿ ಬೂತ್ ಸಮಿತಿಯ ಕಾರ್ಯದರ್ಶಿ ಯಾದ ಶ್ರೀಮತಿ ಪ್ರಮೀಳಾ ಉಪಸ್ಥಿತರಿದ್ದರು.