ವಿಟ್ಲ : ಸೇವೆಯನ್ನು ಕೊಟ್ಟು ಯಶಸ್ವಿನ ಸಾಧನೆ ಯನ್ನು ಪಡೆಯುದೆ ಗ್ರಾಮಾಭಿವೃದ್ದಿ ಯೋಜನೆಯ ಪ್ರಕ್ರಿಯೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ದುಗ್ಗೇ ಗೌಡ ಹೇಳಿದರು.
ಅವರು ಸೆ.22ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ ಇದರ ಆಶ್ರಯದಲ್ಲಿ ಭಾರತ್ ಅಡಿಟೋರಿಯಂ ಚಂದಳಿಕೆ ವಿಟ್ಲ ಇಲ್ಲಿ ನಡೆದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ರಾದ ಬಾಲಕೃಷ್ಣ ಆಳ್ವ ಕೊಡಾಜೆ ಗ್ರಾಮಭಿವೃದ್ಧಿ ಯೋಜನೆಯಿಂದ ಸಮುದಾಯ ಹಾಗೂ ಸಂಘದ ಸದಸ್ಯರಿಗೆ ಆಗಿರುವ ಪ್ರಯೋಜನಗಳು,
ಎಸ್ ಬಿ ಐ ಬ್ಯಾಂಕ್ ಮಲ್ಲಿಕಟ್ಟೆ ಯ ಪ್ರದಾನ ವ್ಯವಸ್ಥಾಪಕ ಶ್ರೀಮತಿ ಭವಾನಿ, ಸ್ವ ಸಹಾಯ ಸಂಘ ಗಳು ಬ್ಯಾಂಕಿಗೆ ನೀಡಬೇಕಾದ ದಾಖಲಾತಿ ಗಳು ಹಾಗೂ ಬ್ಯಾಂಕ್ ಪ್ರತಿನಿಧಿ ಯಾಗಿ ಎಸ್ ಕೆ ಡಿ ಆರ್ ಡಿ ಪಿ ನಿರ್ವಹಿಸುತ್ತಿರುವ ಜವಾಬ್ದಾರಿಗಳು,
ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ದಶ ಅಂಶಗಳು ಹಾಗೂ ಯೋಜನೆ ಯ ಸ್ವ -ಸಹಾಯ ಸಂಘ ಗಳ ವ್ಯವಸ್ಥೆ ಕುರಿತು,
ಯೋಜನಾಧಿಕಾರಿ ರಮೇಶ್ ಯೋಜನೆ ಯ ವಿವಿಧ ಕಾರ್ಯಕ್ರಮಗಳು ಹಾಗೂ ತಾಲೂಕಿನಲ್ಲಿ ಕೈಗೊಳ್ಳಲಾದ ಸಾಧನೆ ಮಾಹಿತಿ ನೀಡಿದರು .
ಈ ಸಂಧರ್ಭ ದಲ್ಲಿ ಯೋಜನೆಯ ಕಾರ್ಯ ಚಟುವಟಿಕೆಗಳ ನ್ನು ವಿವರಿಸುವ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್. ಬಿ. ಐ. ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ವರದಾ, ಎಮ್. ಐ. ಎಸ್. ಯೋಜನಾಧಿಕಾರಿ ಶಕುಂತಲಾ, ಬಿ. ಸಿ. ಯೋಜನಾಧಿಕಾರಿ ಸುಪ್ರೀತ್ ಜೈನ್, ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ವಲಯ ಅಧ್ಯಕ್ಷರುಗಳಾದ ರಾಜೇಂದ್ರ, ಗಣೇಶ್ ಮೈರುಗ, ರೋಬರ್ಟ್ ಫೆರ್ನಾಂಡಿಸ್ , ತುಳಸಿ, ಪ್ರಮೀಳಾ, ದಿನೇಶ್ ಶೆಟ್ಟಿ, ಸುಧಾಕರ ಸಫಲ್ಯ, ವಲಯ ಮೇಲ್ವಿಚಾರಕರುಗಳಾದ ಜಗದೀಶ್, ಸುಗುಣ ಶೆಟ್ಟಿ, ಸರಿತಾ, ಸವಿತಾ, ಮಾಲತಿ, ಆಶಾ ಪಾರ್ವತಿ, ನಾಗೇಶ್, ಶಾರದಾ, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಚಿದಾನಂದ, ಲೆಕ್ಕ ಪರಿಶೋದಕಿ ಕವಿತಾ ವಸಂತ, ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಒಕ್ಕೂಟ ಗಳ ಸೇವಾ ಪ್ರತಿನಿದಿಗಳು ಉಪಸ್ಥಿತರಿದ್ದರು.
ಅಳಿಕೆ ವಲಯ ಮೇಲ್ವಿಚಾರಕಿ ಮಾಲತಿ ಪ್ರಾರ್ಥಿಸಿ, ತಾಲೂಕು ಯೋಜನಾಧಿಕಾರಿ ರಮೇಶ್ ಸ್ವಾಗತಿಸಿ, ವಿಟ್ಲ ವಲಯ ಮೇಲ್ವಿಚಾರಕಿ ಸರಿತಾ ವಂದಿಸಿ, ಕೇಪು ವಲಯ ಮೇಲ್ವಿಚಾರಕ ಜಗದೀಶ್ ಕಾರ್ಯಕ್ರಮ ನೀರೂಪಿಸಿದರು.