ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ವಾಳ ನಗರ ವಲಯ ಮತ್ತು ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘ (ರಿ) ವಿದ್ಯಾಗಿರಿ ಬಂಟ್ವಾಳ ಇವರ ಆಡಳಿತಕ್ಕೆ ಒಳಪಟ್ಟ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ2024-25 ರ ಸಾಲಿನ ಬಂಟ್ವಾಳ ನಗರ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿಕಾರ್ಯಕ್ರಮನಡೆಯಿತು.26 ಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಹಾಗೂ ವಿವಿಧ ಶಾಲೆಗಳಿಂದ ಶಿಕ್ಷಕರು ತೀರ್ಪುಗಾರರಾಗಿ ಆಗಮಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಶ್ರೀಮತಿ.ಕೆ.ರೇಖಾ ಶೆಣೈ ಅವರುಅಧ್ಯಕ್ಷತೆ ವಹಿಸಿದರು. ಶ್ರೀಮತಿ ಪ್ರತಿಮಾ ವೈ.ವಿ ಶಿಕ್ಷಣ ಸಂಯೋಜಕರು ಮತ್ತುತಾಲೂಕುಪ್ರತಿಭಾಕಾರಂಜಿ ನೋಡಲ್ಅಧಿಕಾರಿ, ಶ್ರೀಮತಿ ಸುರೇಖಾ ಯಾಳವಾರ, ಬಂಟ್ವಾಳ ನಗರ ವಲಯ ಮಟ್ಟದ ಪ್ರತಿಭಾಕಾರಂಜಿ ನೋಡಲ್ ಹಾಗೂ ಶ್ರೀ ಸತೀಶ್ರಾವ್ ವಲಯ ಸಂಪನ್ಮೂಲ ವ್ಯಕ್ತಿ ಬಂಟ್ವಾಳ ತಾಲೂಕು , ಶ್ರೀಮತಿ ಪ್ರೇಮ ಕೆ.ಕೆ, ಶ್ರೀ ನೋಣಯ್ಯ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀಯುತ ಹರಿಪ್ರಸಾದ್, ಶ್ರೀಯುತ ಸತೀಶ್ ಬಂಗೇರ ಮತ್ತು ಶ್ರೀಮತಿ ಹೇಮಲತಾ ಪೂರ್ವ ಪ್ರಾಥಮಿಕವಿಭಾಗದ ಮುಖ್ಯಸ್ಥೆ ಭಾಗವಹಿಸಿದರು.
ಪ್ರತಿಭಾಕಾರಂಜಿ ಸ್ಫರ್ಧೆಯನ್ನು ಉದ್ದೇಶಿಸಿ ಮಾತನಾಡಿದಶ್ರೀಮತಿ ಪ್ರತಿಮಾ ವೈ.ವಿಪ್ರತಿಭಾಕಾರಂಜಿಮಕ್ಕಳ ಸೂಕ್ತ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸುವಒಂದು ಉತ್ತಮ ವೇದಿಕೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ ಪಾರಾದರ್ಶಕವಾಗಿ ತೀರ್ಪು ನೀಡಬೇಕು ಎಂದು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಗುಂಪು ಸ್ಫರ್ಧೆಗಳ ವಿಜೇತರಿಗೆ ಪ್ರಶಸ್ತಿ ನೀಡಿಗೌರವಿಸಲಾಯಿತು.
ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಸತೀಶ್ ಬಂಗೇರ ಸ್ವಾಗತಿಸಿ. ಶ್ರೀಮತಿ ಪ್ರತಿಮಾ ವೈ ವಿ ಇಲಾಖಾ ವತಿಯಿಂದ ಧನ್ಯವಾದ ಸಮರ್ಪಿಸಿದರು. ಶಾಲೆಯ ಶಿಕ್ಷಕರಾದ ಶ್ರೀಯುತ ಪ್ರದೀಪ್ ನಾಯಕ್ ಮತ್ತು ಶ್ರೀಮತಿ ರೇಖಾನಾಗೇಶ್ ಕಾರ್ಯಕ್ರಮ ನಿರೂಪಿಸಿದರು.