ವಾಷಿಂಗ್ಟನ್‌: ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿಯಾಗಿದೆ. ಪೊಲಾರಿಸ್ ಡಾನ್ ಯೋಜನೆಯಡಿ ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹೋಗಿದ್ದ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್‌ ಆಗಿದ್ದಾರೆ.

ಇಬ್ಬರು ನಾಸಾ ಪೈಲಟ್‌ಗಳು, ಒಬ್ಬ ಸ್ಪೇಸ್‌ಎಕ್ಸ್ ಉದ್ಯೋಗಿ ಹಾಗೂ ಬಿಲಿಯನೇರ್ ಜರೇಡ್ ಐಸಾಕ್‌ಮನ್ ಈ ಖಾಸಗಿ ಬಾಹ್ಯಕಾಶ ನಡಿಗೆ ತಂಡದಲ್ಲಿದ್ದರು. ಇವರನ್ನು ಹೊತ್ತಿದ್ದ ನೌಕೆ ಯಶಸ್ವಿಯಾಗಿ ಮೆಕ್ಸಿಕೋ ಕೊಲ್ಲಿಯಲ್ಲಿ ಇಳಿದಿದೆ. ಭೂಮಿಯಿಂದ ಸುಮಾರು 740 ಕಿ.ಮೀ. ದೂರದಲ್ಲಿ ಯಶಸ್ವಿಯಾಗಿ ಬಾಹ್ಯಕಾಶ ನಡಿಗೆ ನಡೆದಿತ್ತು.

ಸಾಮಾನ್ಯವಾಗಿ ತರಬೇತಿ ಹೊಂದಿದ್ದ ಗಗನಯಾತ್ರಿಗಳನ್ನು ಮಾತ್ರ ಬಾಹ್ಯಕಾಶಕ್ಕೆ ಕಳುಹಿಸಿ ಕೊಡಲಾಗುತ್ತದೆ. ಆದರೆ ಸಾಮಾನ್ಯರೂ ಬಾಹ್ಯಕಾಶಕ್ಕೆ ಹೋಗುವ ಮೂಲಕ ಬಾಹ್ಯಕಾಶ ನಡಿಗೆ ಕೈಗೊಂಡ ಮೊದಲ ಖಾಸಗಿ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಬಿಲಿಯನೇರ್ ಜರೇಡ್ ಐಸಾಕ್‌ಮನ್ ಪಾತ್ರರಾಗಿದ್ದಾರೆ.

ಸ್ಪೇಸ್‌ ಎಕ್ಸ್‌ ಮಾಲೀಕ ಎಲೋನ್‌ ಮಸ್ಕ್‌ ಎಕ್ಸ್‌ನಲ್ಲಿ ನಾಲ್ವರ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ 18 ವರ್ಷದ ಹಿಂದೆ ಫಾಲ್ಕನ್‌ ಫೈಟ್‌ ರಾಕೆಟ್‌ ಫೇಲ್‌ ಆದ ಸಂದರ್ಭದ ಫೋಟೋವನ್ನು ಅಪ್ಲೋಡ್‌ ಮಾಡಿದ್ದಾರೆ.