ಬಂಟ್ವಾಳ ತಾಲೂಕು ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸಿಂಹ ಮಾಸದ ನೇಮೋತ್ಸವ ಪ್ರಯುಕ್ತ ಸೆ.15ರಂದು ಮಧ್ಯಾಹ್ನ ಧರ್ಮದೈವ ಶ್ರೀ ಕೊಡಮಣಿತ್ತಾಯ ದೈವಕ್ಕೆ ನೇಮೋತ್ಸವ ಮತ್ತು ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170ನೇ ಜನ್ಮದಿನಾಚರಣೆ ಪ್ರಯುಕ್ತ ಗುರುಪೂಜೋತ್ಸವ, ಭಜನಾ ಕಾರ್ಯಕ್ರಮ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭಾಗವಹಿಸಿ, ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಭರತ್ ಕುಮಾರ್ ರೈ ಪೀರ್ದಬೆಟ್ಟುಗುತ್ತು, ಶ್ರೀಮತಿ ಸುರೇಖಾ ಸುರೇಂದ್ರ ಆರಿಗ ಪಂಜಿಕಲ್ಲುಗುತ್ತು ಮಾಗಣೆ, ರಘುಚಂದ್ರ ಚೌಟ ಬಾಲೇಶ್ವರಗುತ್ತು, ಕೋಟಿ ಪೂಜಾರಿ ಕೇಲ್ದೋಡಿಗುತ್ತು , ಜೇರ್ಣೋದ್ಧಾರ ಸಮಿತಿ ಸದಸ್ಯರು, ಗರಡಿ ಸೇವಾ ಸಮಿತಿ ಸದಸ್ಯರು, ಗರಡಿ ಫ್ರೆಂಡ್ಸ್ ಕ್ಲಬ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.