ಅಯೋಧ್ಯೆಯಿಂದ ಬಂದ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸಲು ಪಣೆಕಲ, ಮಣಿಹಳ್ಳ ಮಹಮ್ಮಾಯಿ ದುರ್ಗಾಂಬ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ವಾರ್ಡ 60ರ ಕುದನೆ, ಕೆಮ್ಮಟೆ ಗುಡ್ಡೆ , ಬರ್ದೆಲ್ ಗ್ರಾಮದ ಶ್ರೀ ರಾಮ ಭಕ್ತರು ಹಿಂದೂ ಮನೆಗಳಿಗೆ ತೆರಳಿ ಕರಪತ್ರ , ಆಯೋಧ್ಯ ರಾಮ ಮಂದಿರದ ಭಾವಚಿತ್ರ ಹಾಗೂ ರಾಮನ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗೆ ಹಂಚಿದರು.
ಅಯೋಧ್ಯ ಶ್ರೀರಾಮ ಮಂದಿರದ ತೀರ್ಥ ಕ್ಷೇತ್ರ ಟ್ರಸ್ಟ್ ಜ.22ರಂದು ಅಯ್ಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನ ಪೂರ್ವಭಾವಿಯಾಗಿ ದೇಶಾದ್ಯಂತ ವಿಶ್ವ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಪರಿವಾರ ಸಂಘಟನೆಗಳು ಭಾರತದಲ್ಲಿರುವ ಸಮಸ್ತ ಹಿಂದೂ ಮನೆಗಳಿಗೆ ಕರಪತ್ರ , ಆಯೋಧ್ಯ ರಾಮ ಮಂದಿರದ ಭಾವಚಿತ್ರ ಹಾಗೂ ರಾಮನ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗೆ ಹಂಚಿದರು.
ಕೋಟ್ಯಾಂತರ ಹಿಂದುಗಳ ಕನಸು ನನಸಾಗುವ ಸಮಯ ಸನ್ನಿತವಾಗಿದೆ. ಕೋಟ್ಯಾಂತರ ಭಕ್ತರು ಈಗಾಗಲೇ ನಾನಾ ರೀತಿಯ ಕೋಡುಗೆ ನೀಡಿದ್ದಾರೆ. ರಾಮ ಮಂದಿರದ ನಿರ್ಮಾಣಕ್ಕೆ ಕಾಣಿಕೆ ನೀಡಿದವರ ಮನೆ ಬಾಗಿಲಿಗೆ ಪ್ರಸಾದ ತಲುಪಬೇಕು.
ಈ ನಿಟ್ಟಿನಲ್ಲಿ ಟ್ರಸ್ಟ್ ನವರು ಪ್ರತಿಯೊಬ್ಬರ ಮನೆಗೂ ರಾಮ ದೇವರ ಪ್ರಸಾದವನ್ನು ತಲುಪಿಸುವ ಹಿತದೃಷ್ಟಿಯಿಂದ ಪ್ರತೀ ಊರು, ಗ್ರಾಮಕ್ಕೆ ಮಂತ್ರಾಕ್ಷತೆ, ಭಾವ ಚಿತ್ರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಮಂತ್ರಾಕ್ಷತೆ ರೂಪದಲ್ಲಿ ದೇವರೇ ಮನೆ ಬಾಗಿಲಿಗೆ ಬರಲಿದ್ದಾನೆ ಅದನ್ನು ಜಾಗರೂಕವಾಗಿರಿಸಿ ಪೂಜೆ ಮಾಡುವ ಪ್ರತಿಜ್ಞೆ ಮಾಡಬೇಕು. ಜ.22ರಂದು ಪ್ರತೀ ಗ್ರಾಮದಲ್ಲಿ ಹರೇ ರಾಮ ಭಜಬೆ ಹಾಡುಗಳನ್ನು ಹಾಡಬೇಕು. ಸಂಜೆ.5 ಗಂಟೆಗೆ ಜ್ಯೋತಿ ಬೆಳಗಿ ಉತ್ತರ ದಿಕ್ಕಿಗೆ ಆರತಿ ಬೆಳಗುವ ಮೂಲಕ ಅವಿಸ್ಮರಣೀಯ ದಿನವನ್ನಾಗಿಸಬೇಕು.