ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ನಂದಾವರದ ನಂದಾವರ ವೀರಾಂಜನೇಯ ಸ್ವಸಹಾಯ ಸಂಘದ ಸದಸ್ಯರಾದ ಸುದರ್ಶನ್ ಅವರು ಯೋಜನೆಯ ಸಿಡಿಬಿ ಸಾಲ ಪಡೆದು ಎಫ್ ಎಮ್ ಸಿ ಸಿ ಡಿಸ್ಟ್ರಿಬ್ಯೂಟರ್ ಉದ್ಯೋಗ ಮಾಡಿಕೊಂಡಿದ್ದು ವಿಪರೀತ ಮಳೆಯಿಂದಾಗಿ ಮಳೆನೀರು ತನ್ನ ಗೋದಾಮಿಗೆ ನುಗ್ಗಿ ಶೇಖರಣೆ ಇಟ್ಟ ವಸ್ತುಗಳು ಮಳೆಯಲ್ಲಿ ನೆನೆದು ನಷ್ಟವಾಗಿದ್ದು ಪರಿಹಾರವಾಗಿ ಕ್ಷೇತ್ರದಿಂದ ಮಂಜೂರು ಗೊಂಡ ರೂ 20,000 ಮೊತ್ತದ ಪರಿಹಾರ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಯೋಚನೆಯ ಬಂಟ್ವಾಳ ತಾಲೂಕು ಯೋಚನಾಧಿಕಾರಿ ಬಾಲಕೃಷ್ಣ ಎಂ. ನಂದಾವರ ಒಕ್ಕೂಟದ ಅಧ್ಯಕ್ಷರಾದ ಸುರೇಶ್, ತುಂಬೆ ವಲಯದ ಮೇಲ್ವಿಚಾರಕರಾಕಿ ಮಮತಾ , ಸೇವಾ ಪ್ರತಿನಿಧಿ ವನಿತ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.