ಅಬುಧಾಬಿ: ಗಂಡನಿಗೆ ಇನ್‌ಸ್ಟಾಗ್ರಾಂನಲ್ಲೇ ವಿಚ್ಛೇದನ ನೀಡಿದ್ದ ದುಬೈ ರಾಜಕುಮಾರಿ ಶೇಖ್ ಮಹ್ರಾ ಅಲ್ಮ್ ಮಕ್ತೌಮ್ಈಗ ಸುಗಂಧ ದ್ರವ್ಯ ಬಿಡುಗಡೆ ಮಾಡಿ ಸುದ್ದಿಯಾಗಿದ್ದಾರೆ.

2023ರಲ್ಲಿ ಇವರಿಗೆ ವಿವಾಹವಾಗಿದ್ದು, ಒಂದು ವರ್ಷದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿ ಮಗು ಹುಟ್ಟಿದ 2 ತಿಂಗಳ ಬಳಿಕ ಗಂಡನಿಗೆ ವಿಚ್ಛೇದನ ನೀಡಿದ್ದಾರೆ.
ದುಬೈ ರಾಜಕುಮಾರಿ ಶೇಖ್ ಮಹ್ರಾ ತನ್ನ ಗಂಡ ಶೇಖ್ ಮನ ಅಲ್ ಮಕ್ತೌಮ್ ಅವರಿಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತ್ರಿವಳಿ ತಲಾಖ್ ಹೇಳಿದ್ದರು. ಗಂಡನ ದಾಂಪತ್ಯ ದ್ರೋಹವೇ ವಿಚ್ಛೇದನ ನೀಡಲು ಕಾರಣ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.
ಪೋಸ್ಟ್ ನಲ್ಲಿ, ಆತ್ಮೀಯ ಪತಿ, ನೀವು ಬೇರೆ ಸಂಬಂಧ ಹೊಂದಿರುವುದರಿಂದ ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ ಇಂತಿ ನಿಮ್ಮ ಮಾಜಿ ಹೆಂಡತಿ ಎಂದು ಬರೆದುಕೊಂಡಿದ್ದು, ಇದೀಗ ರಾಜಕುಮಾರಿ ಹೊಸ ಪರ್ಫ್ಯೂಮ್ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಡಿವೋರ್ಸ್’ (Divorce) ಹೆಸರಿನ ಸುಗಂಧ ದ್ರವ್ಯ ಬಾಟಲಿ ಚಿತ್ರ ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ.
2023ರಲ್ಲಿ ಇವರಿಗೆ ವಿವಾಹವಾಗಿದ್ದು, ಒಂದು ವರ್ಷದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿ ಮಗು ಹುಟ್ಟಿದ 2 ತಿಂಗಳ ಬಳಿಕ ಗಂಡನಿಗೆ ವಿಚ್ಛೇದನ ನೀಡಿದ್ದಾರೆ.