ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಮಹತೋಬಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ 26ನೇ ವರ್ಷದ ಶೇಷ ನಾಗ ಜೋಡುಕರೆ ಕಂಬಳವನ್ನು ಶ್ರೀ ಮಹಿಷಿಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ. ಶ್ರೀಧರ್ ರಾವ್ ಜ.7ರಂದು ಉದ್ಘಾಟಿಸಿದರು.
ಮಾಜಿ ಶಾಸಕ ಪ್ರಭಾಕರ ಬಂಗೇರ, ತಾಲೂಕು ಗೌಡ ಸಮುದಾಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಮಾಜಿ.ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ, ನಾರಾಯಣ ಪೂಜಾರಿ, ಬೆಳ್ತಂಗಡಿ ವಕೀಲ ಸಂಘ ಅಧ್ಯಕ್ಷ ವಸಂತ ಮರಕಡ, ಸುಧೀರ್ ಶೆಟ್ಟಿ ಕೊಡಬೆಟ್ಟು, ಪದ್ಮನಾಭ ಸುರ್ವಣ, ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ, ಮಚ್ಚಿನ ಗ್ರಾ.ಪಂ.ಉಪಾಧ್ಯಕ್ಷೆ ಸೋಮಾವತಿ , ಪಿಡಿಓ ಗೌರಿಶಂಕರ, ಅನಂತರಾಮ್ ಗೌಡ, ಸದಾಶಿವ ಹೆಗ್ಡೆ, ಬದರಿನಾಥ ಸಂಪಿಗೆತ್ತಾಯ ಉಪಸ್ಥಿತರಿದ್ದರು.
ದೇವಾಲಯದ ಅನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಾಯ ಸ್ವಾಗತಿಸಿ, ಬಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.