ಬಂಟ್ವಾಳ : ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವಿರಕಂಬ ಇಲ್ಲಿನ ಶಾಲಾಭಿವೃದ್ಧಿ ಸಮಿತಿಯ ನೂತನ ಸಮಿತಿಯ ಆಯ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.
ಅದರಂತೆ ಕೊರಗಪ್ಪ ನಾಯ್ಕ ಸಿಂಗೇರಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವನಿತಾ ಸಾರುನೊಜಿ, ಪ್ರಧಾನ ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮಂಡೋನ್ಸಾ, ಸದಸ್ಯರುಗಳಾಗಿ ಆಶಾ ಗೋಳ್ತಮಜಲು, ಮಹಾಬಲ ನಾಯ್ಕ ಕಿನ್ನಿಮೂಲೆ,ಅಬ್ದುಲ್ ಮಜಿದ್ ವೀರಕಂಬ, ಉಮ್ಮರ್ ಫಾರೂಕ್ ಮದಕ,ರಹಮತ್ ವೀರಕಂಬ,ಫಾತಿಮಾ ಝೊಹರ ಕಂಪದ ಬೈಲು, ಮಾಲತಿ ಅನಂತಾಡಿ, ದಿವ್ಯ ಮಂಗಳಪದವು, ಗೀತಾ ಮೈರಾ, ವಿದ್ಯಾ ಗುಡ್ಡೆತೋಟ,ರಂಜಿತಾ ಮಜಿ, ಸುಧಾಕರ ವೀರಕಂಬ, ಗೋಪಾಲಕೃಷ್ಣ ಭಟ್ ದಿವಾನ, ವಾಮನ ಬಂಗೇರ ತುಳಸಿವನ, ಲಕ್ಷ್ಮಣಗೌಡ ನಂದಂತಿಮಾರು, ವಿಶ್ವನಾಥ ಎಮೆ೯ಮಜಲು, ಆಯ್ಕೆಯಾದರು. ಪದನಿಮಿತ್ತ ಸದಸ್ಯರುಗಳಾಗಿ, ಶಿಕ್ಷಣ ಪ್ರೇಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಜಯಶೀಲಾ ಗಾಂಭೀರ್, ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ, ಅಂಗನವಾಡಿ ಶಿಕ್ಷಕಿ ಸುಮತಿ, ಶಾಲಾ ಹಿರಿಯ ಶಿಕ್ಷಕಿ ಶಕುಂತಲಾ, ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಶಾರೀರಿಕ ಶಿಕ್ಷಕ ಇಂದುಶೇಖರ್ ಕುಲಾಲ್ ವಂದಿಸಿ, ಸಹ ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.