ಯೆನೆಪೋಯ ಸೆಂಟರ್ ಫಾರ್ ಫ್ಯಾಕಲ್ಟಿ ಡೆವಲಪ್ಮೆಂಟ್, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ), ದೇರಳಕಟ್ಟೆಯಲ್ಲಿ 2024 ರ ಸೆಪ್ಟೆಂಬರ್ 4 ರಂದು “ಶಿಕ್ಷಕರ ದಿನಾಚರಣೆ 2024ರ ಅಂಗವಾಗಿ ಎಲ್ಲಾ ಘಟಕ ಕಾಲೇಜುಗಳ ಶಿಕ್ಷಕರಿಗೆ ವರ್ಷದ ಶಿಕ್ಷಕ ಪ್ರಶಸ್ತಿ” ಯನ್ನು ನೀಡಿ ಅಭಿನಂದಿಸಲಾಯಿತು. ಈ ಕರ‍್ಯಕ್ರಮದಲ್ಲಿ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ಎಲ್ಲಾ ಘಟಕ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 350 ಜನರು ಭಾಗವಹಿಸಿದರು.

ದೇರಳಕಟ್ಟೆಯಲ್ಲಿ 2024 ರ ಸೆಪ್ಟೆಂಬರ್ 4 ರಂದು “ಶಿಕ್ಷಕರ ದಿನಾಚರಣೆ 2024ರ ಅಂಗವಾಗಿ ಎಲ್ಲಾ ಘಟಕ ಕಾಲೇಜುಗಳ ಶಿಕ್ಷಕರಿಗೆ ವರ್ಷದ ಶಿಕ್ಷಕ ಪ್ರಶಸ್ತಿ” ಯನ್ನು ನೀಡಿ ಅಭಿನಂದಿಸಲಾಯಿತು.

ಈ ಕರ‍್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರೊಫೆಸರ್. ಬಿ. ರವಿ, ನಿರ್ದೇಶಕರು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್” ಆಗಮಿಸಿದರು.

ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದ ಕುಲಸಚಿವರಾದ ಡಾ.ಕೆ.ಎಸ್. ಗಂಗಾಧರ ಸೋಮಯಾಜಿಯವರು ಸ್ವಾಗತ ಭಾಷಣ ನೀಡಿದರು.

ಸಮುದಾಯ ವೈದ್ಯಕೀಯ ವಿಭಾಗದ, ಪ್ರೊಫೆಸರ್ ರಾದ ಡಾ. ಪೂನಂ ಆರ್ ನಾಯ್ಕ್, ರವರು ಮುಖ್ಯ ಅತಿಥಿಗಳ ಪರಿಚಯವನ್ನು ನೀಡಿದರು.

ಮುಖ್ಯ ಅತಿಥಿಗಳಾದ ಪ್ರೊ.ಬಿ ರವಿ ನರ‍್ದೇಶಕರು, ಎನ್‌ಐಟಿಕೆ ಸುರತ್ಕಲ್ ಅವರು ಸಮಾಜಕೆ ಶಿಕ್ಷಣ, ಸಂಶೋಧನೆ, ಆವಿಷ್ಕಾರದ ಕೊಡುಗೆಯಲ್ಲಿ ಶಿಕ್ಷಕರು ಹಾಗು ಉನ್ನತ ಶಿಕ್ಷಣ ಕೇಂದ್ರಗಳ ಪಾತ್ರದ ಕುರಿತು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಎಲ್ಲಾ ಘಟಕ ಕಾಲೇಜುಗಳ ಮೂವತ್ತೆರಡು ಅಧ್ಯಾಪಕರಿಗೆ ವರ್ಷದ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು ಹಾಗೂ ಎಲ್ಲಾ ಘಟಕಗಳ ಹದಿಮೂರುವಿಭಾಗಗಳಿಗೆ “ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ” ಗಳನ್ನು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ ಬಿ ಎಚ್ ಶ್ರೀಪತಿ ರಾವ್, ಸಹ ಉಪಕುಲಪತಿ, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ), ಅಧ್ಯಾಪಕ ವೃತ್ತಿಯಲ್ಲಿ ಸುಧಾರಣೆ ಮತ್ತು ಸ್ಮರಣಾ ಮನೋಭಾವದ ಅಗತ್ಯವನ್ನು ತಿಳಿಸಿದರು.

ಡಾ. ಅಭಯ್ ಎಸ್ ನರ್ಗುಡೆ, ಉಪನಿರ್ದೇರು, YEN-FDC, ಮತ್ತು ಡೀನ್, ಫ್ಯಾಕಲ್ಟಿ ಆಫ್ ಮೆಡಿಸಿನ್, ಯೆನೆಪೋಯ ವೈದ್ಯಕೀಯ ಕಾಲೇಜು, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಧನ್ಯವಾದಗಳನ್ನು ರ‍್ಪಿಸಿದರು. ಕರ‍್ಯಕ್ರಮವನ್ನು ಡಾ. ನೇಹಾ ಹಸ್ವಾನಿ, ಮತ್ತು ಡಾ. ಐಶ್ರ‍್ಯರವರು ನಿರೂಪಿಸಿದರು. ಶಿಕ್ಷಕರ ದಿನಾಚರಣೆಯ ಸಂಘಟನಾ ತಂಡದಲ್ಲಿ ಸದಸ್ಯರಾಗಿ ಡಾ.ವಿನಿತಾ ಬೋಳೂರು, ಡಾ.ನೇಹಾ ಹಸ್ವಾನಿ, ಡಾ. ಶ್ರೀದೇವಿ ಕೆ, ಡಾ. ಇಮ್ರಾನ್ ಪಾಷಾ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕರ‍್ಯಕ್ರಮ ಮುಕ್ತಾಯಗೊಳಿಸಲಾಯಿತು.