ಮಾಣಿ ಮಹಾಶಕ್ತಿ ಕೇಂದ್ರ, ರೈತ ಮೋರ್ಚಾ ಬಂಟ್ವಾಳ ಬಿಜೆಪಿ ಮಂಡಲ, ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ, ಮಹಿಳಾ ಮೋರ್ಚಾ ಬಿಜೆಪಿ ಬಂಟ್ವಾಳ ಮಂಡಲ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ಜನತಾ ಪಕ್ಷದ ಸೂಚನೆಯನ್ವಯ ನಿವೃತ್ತಿ ಹೊಂದಿದ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಿ ಸನ್ಮಾನ ಗೌರವ ಅರ್ಪಣೆ ಮಾಡುವ ಅರ್ಥಪೂರ್ಣ ಕಾರ್ಯಕ್ರಮವಿಂದು ಅನಂತಾಡಿ ಗ್ರಾಮದಲ್ಲಿ ಶ್ರೀ ಸನತ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಿತು.

ಪಕ್ಷದ ವತಿಯಿಂದ ಶ್ರೀಯುತ ತಾರಾನಾಥ ಶೆಟ್ಟಿ ಹಿರ್ತಂದಬೈಲು,ಶ್ರೀಯುತ ಗಂಗಾಧರ ಆಳ್ವ ಬಂಟ್ರಿಂಜ ಮತ್ತು ಶ್ರೀಮತಿ ಅಮ್ಮತಾಯಿ ಬಂಟ್ರಿಂಜ ಅವರಿಗೆ ಅವರ ಸ್ವಗೃಹದಲ್ಲಿ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಶಿಕ್ಷಕರ ದಿನಾಚರಣೆಯ ವಿಶೇಷ ದಿನವಾದ ಇಂದು ಸನ್ಮಾನಿಸಿ ಗೌರವಾರ್ಪಣೆ ಮಾಡಿ ಅಭಿನಂದಿಸಲಾಯಿತು. ಸನ್ಮಾನ ಅಭ್ಯಂಗತರು ಸನ್ಮಾನ ಸ್ವೀಕರಿಸಿ ಅತ್ಯಂತ ಖುಷಿಯಿಂದ ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷ ಶ್ರೀ ಪುಷ್ಪರಾಜ್ ಟೌಟ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ ರೈ ಮೂರ್ಜೆಬೆಟ್ಟು,ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಶ್ ಭಂಡಾರಿ,ಮಹಿಳಾ ಮೋರ್ಚ ಜಿಲ್ಲಾ ಉಪಾಧ್ಯಕ್ಷೇ ಶ್ರೀಮತಿ ಕಮಲಾಕ್ಷಿ, ಶಕ್ತಿಕೇಂದ್ರ ಪ್ರಮುಖ್ ಶ್ರೀ ಮಹಾಬಲ ಪೂಜಾರಿ, ಮಂಡಲ ಮಹಿಳಾ ಮೋರ್ಚದ ಸದಸ್ಯರು ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜತಾ, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯೆ ಶ್ರೀಮತಿ ಗೀತಾ, ಸಾಮಾಜಿಕ ಜಾಲತಾಣ ಮಂಡಲ ಸಂಚಾಲಕ ಶ್ರೀ ಶಿವರಾಮ ಶೆಟ್ಟಿ, ಮಂಡಲ ಮಹಿಳಾ ಮೋರ್ಚ ಉಪಾಧ್ಯಕ್ಷೆ ಶ್ರೀಮತಿ ಶಕಿಲಾ, ಅನಂತಾಡಿ ಬಿಜೆಪಿ ಪದಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಹೆಗಡೆ, ತಿಮ್ಮಪ್ಪ ಗೌಡ,ಉಮೇಶ್ ಪೂಜಾರಿ, ಕೇಶವ ಪೂಜಾರಿ, (ಬೂತ್ ಕಾರ್ಯದರ್ಶಿ) ಹೇಮಂತ್, ಯತಿರಾಜ್ ಶೆಟ್ಟಿ,ಮಾಣಿ ವಿಜಯ, ಜನಾರ್ದನ ಗೌಡ ಸಾಕೋಟೆಮಾರ್ ಉಪಸ್ಥಿತರಿದ್ದರು. ಶ್ರೀಮತಿ ಭವಾನಿ ಶೆಟ್ಟಿ ಧನ್ಯವಾದ ಅರ್ಪಿಸಿದರು.