ಬಂಟ್ವಾಳ, ಆ. 13: ನರಿಕೊಂಬು ಗ್ರಾಮ ಏರಮಲೆ ಶ್ರೀ ಕ್ಷೇತ್ರ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಆ.16 ಸಿಂಹ ಸಂಕ್ರಮಣ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಸಲುವಾಗಿ ಭದ್ರಕಾಳಿ ಅಮ್ಮನವರಿಗೆ ಸಹಸ್ರನಾಮ ಪಠನೆ ಕುಂಕುಮಾರ್ಚನೆ ನಡೆಯಲಿರುವುದು.
ಮಧ್ಯಾಹ್ನ 12. 30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ,ಅನ್ನ ಪ್ರಸಾದ ಸೇವೆ ನಡೆಯುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ರಾಜ್ ಬಂಟ್ವಾಳ್ ತಿಳಿಸಿದ್ದಾರೆ. ಸರ್ವ ಭಕ್ತಾಭಿಮಾನಿಗಳು ಪಾಲ್ಗೊಳ್ಳಲು ವಿನಂತಿಸಲಾಗಿದೆ.