ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರಿಜಿಸ್ಟರ್ ಬಂಟ್ವಾಳ ಇದರ ತುಂಬೆ ವಲಯದ ಕಳ್ಳಿಗೆ ಒಕ್ಕೂಟದಲ್ಲಿ “ಆಟಿದ ನೆಂಪು” ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಕಳ್ಳಿಗೆ ಯಲ್ಲಿ ನಡೆಯಿತು.
ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಂ. ಅವರು ಆಟಿ ಕೆಲೆಂಜನಿಗೆ ದವಸಧಾನ್ಯ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿ ಆಚರಣೆಗಳು ಮೂಲ ಸಂಸ್ಕೃತಿಗೆ ದಕ್ಕೆ ಬರದ ರೀತಿಯಲ್ಲಿ ಆಚರಿಸಬೇಕು. ಪ್ರತಿ ಒಕ್ಕೂಟಗಳಲ್ಲಿಯೂ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದಲ್ಲಿ ಒಕ್ಕೂಟವು ಸಕ್ರಿಯವಾಗಿರಲು ಸಾಧ್ಯವಿದೆ ಎಂದರು.
ಕಳ್ಳಿಗೆ ಒಕ್ಕೂಟದ ಅಧ್ಯಕ್ಷರಾದ ಜಯಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮರಕೂಟ್ಲು ಜ್ಯೋತಿಷ್ಯರಾದ ಅನಿಲ್ ಪಂಡಿತ್ ರವರು ಆಟಿ ತಿಂಗಳ ಮಹತ್ವದ ಬಗ್ಗೆ, ಹಿಂದಿನ ಕಾಲದಲ್ಲಿ ಇದ್ದ ಬಡತನ ಅದಕ್ಕೆ ಪೂರಕವಾಗಿ ಆಟಿ ತಿಂಗಳಲ್ಲಿ ತಿನ್ನುವ ತಿನಿಸುಗಳು, ಮಾಡುವ ಆಚಾರ ವಿಚಾರ, ಈ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.
.
ಒಕ್ಕೂಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಕಳ್ಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪುರುಷೋತ್ತಮ ಕೊಟ್ಟಾರಿ, ಬ್ರಹ್ಮರ ಕೂಟ್ಲು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉದಯ ಜ್ಯೋತಿಗುಡ್ಡೆ, ಮೂಕಾಂಬಿಕಾ ಕೃಪಾ ಭಜನಾ ಮಂಡಳಿಯ ಅಧ್ಯಕ್ಷರಾದ ನವೀನ್ ಬಂಗೇರ ಪಲ್ಲ ಉಪಸ್ಥಿತರಿದ್ದರು.
ಸೂರ್ಯ ಪ್ರಗತಿ ಬಂದು ಸಂಘದ ಸದಸ್ಯರಾದ ಮಹೇಶ್ ಸ್ವಾಗತಿಸಿ, ಒಕ್ಕೂಟ ಸೇವಾ ಪ್ರತಿನಿಧಿ ಬಬಿತಾ ವಂದಿಸಿ, ತುಂಬೆ ವಲಯದ ಮೇಲ್ವಿಚಾರಕರಾಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.