ಮಾಣಿ ಬಿಜೆಪಿ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 174 ರ ಹೊಸ ಸಮಿತಿ ಸಭೆ ಅ.11ರಂದು ಶಂಭುಗ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಬೂತ್ ಸಂಖ್ಯೆ 174ರ ಅಧ್ಯಕ್ಷರಾಗಿ ಪ್ರವೀಣ್ ಬಂಗುಲೆ ಕಾರ್ಯದರ್ಶಿಯಾಗಿ ನಿಶ್ಮಿತ್ ಶೆಟ್ಟಿ ಶಂಭುಗ ಇವರನ್ನಳಗೊಂಡ ಒಟ್ಟು 12 ಮಂದಿಯ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮಾಣಿಶಕ್ತಿ ಕೇಂದ್ರದ ಪ್ರಮುಖ್ ಹರೀಶ್ ಕುಲಾಲ್ ಮತ್ತು ಮಾಣಿ ಶಕ್ತಿ ಕೇಂದ್ರದ ಪ್ರಭಾರಿಯಾದ ಹರೀಶ್ ರೈ ಪಾಣೂರು ಮತ್ತು ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಅಮುಟೂರು ಬಂಟ್ವಾಳ ಬಿಜೆಪಿ ಮಂಡಲದ ಉಪಾಧ್ಯಕ್ಷರಾದ ಪುಷ್ಪರಾಜ್ ಚೌಟ ಮಾಣಿ, ಮಾಣಿ ಮಹಾಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಭವಾನಿ ಶೆಟ್ಟಿ, ಬೂತ್ ಅಧ್ಯಕ್ಷರಾದ ಸುಧೀರ್ ಶಂಭುಗ ಮತ್ತು ಬಂಟ್ವಾಳ ಮಂಡಲದ ಮಾಜಿ ಕಾರ್ಯದರ್ಶಿ ಗಣೇಶ್ ರೈ ಮತ್ತು ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಮತಾ ಶೆಟ್ಟಿ ಶಂಭುಗ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.