ಬಂಟ್ವಾಳ : ಕಾರ್ಯಕ್ಷೇತ್ರದ ಜೈ ಶ್ರಿ ರಾಮ್ ಜ್ಞಾನವಿಕಾಸ ಕೇಂದ್ರಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ನಡೆಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಬಂಟ್ವಾಳ ಇದರ ವಗ್ಗ ವಲಯದ ಸರಪಾಡಿ
ಸರಪಾಡಿ ದೇವಸ್ಥಾನದ ಅರ್ಚಕ ಜಯರಾಮ್ ಕಾರಂತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷರಾದ ಗಿರೀಶ್ ನಾಯಕ್ ವಹಿಸಿದ್ದರು.
ಮಹಿಳಾ ಸಾಂತ್ವನ ಕೇಂದ್ರದ ಕೌನ್ಸಿಲರ್, ವಿದ್ಯಾ ಅವರು ಪೌಷ್ಟಿಕ ಆಹಾರ ಸೇವನೆಯಿಂದ ಆಗುವ ಉಪಯೋಗಗಳ ಬಗ್ಗೆ ಹಾಗೂ ಅದರ ಅನುಷ್ಠಾನಗಳ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕಿ ಸವಿತಾ ಉಪಸ್ಥಿತರಿದ್ದರು.
ಸಮನ್ವಯಧಿಕಾರಿ ಶ್ರುತಿ ಪ್ರಸ್ತಾವಿಕ ಮಾತನಾಡಿದರು. ಜ್ಞಾನ ವಿಕಾಸ ಸದಸ್ಯೆ ಪುಷ್ಪ ಸ್ವಾಗತಿಸಿ, ಸೇವಾಪ್ರತಿನಿಧಿ ಮೋಹಿನಿ ವಂದಿಸಿ, ಕಾರ್ಯಕ್ರಮ ನೀರೂಪಿಸಿದರು.