ಸಾವೊ ಪೌಲೋ: ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ಬಳಿ ಪತನಗೊಂಡಿದ್ದು ಅದರಲ್ಲಿದ್ದ ಸಿಬ್ಬಂದಿ ಪ್ರಯಾಣಿಕರು ಸೇರಿ ಎಲ್ಲಾ 62 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊ ಪೌಲೋ ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್‌ಲೈನ್‌ ವಿಮಾನವು ಸಾವೊ ಪಾಲೊದಿಂದ ವಾಯುವ್ಯಕ್ಕೆ 80 ಕಿಮೀ (50 ಮೈಲುಗಳು) ದೂರದಲ್ಲಿರುವ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ.

ವಿಮಾನ ವಸತಿ ಪ್ರದೇಶದಲ್ಲಿ ಬಿದ್ದರೂ ನಾಗರಿಕರ ಸಾವು ನೋವಾಗಿಲ್ಲ ಎಂದು ವರದಿಯಾಗಿದೆ. ಪೈಲಟ್‌ ವಿಮಾನ ಮನೆಗಳ ಮೇಲೆ ಬೀಳುವುದನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಮೇಲಿನಿಂದ ಗಿರಕಿ ಹೊಡೆಯುತ್ತಾ ಬೀಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 9ಕ್ಕೆ ಇಳಿಸಲು ಪ್ರಸ್ತಾಪ – ಇರಾಕ್‌ ಮಸೂದೆಗೆ ಆಕ್ರೋಶ

ವಿಮಾನವು ಪತನ ಹೊಂದಲು ಕಾರಣವೇನು ಎಂಬುದರ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದ ಪೈಲಟ್‌ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಏರ್‌ಲೈನ್ಸ್‌ ಬ್ರೆಜಿಲ್‌ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.

ಏರ್‌ಬಸ್ ಮತ್ತು ಇಟಾಲಿಯನ್ ಏರೋಸ್ಪೇಸ್ ಗ್ರೂಪ್ ಲಿಯೊನಾರ್ಡೊ ಜಂಟಿ ಒಡೆತನದದ ಎಟಿಆರ್‌ (ATR) ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.