ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ ಗೌರವಾನ್ವಿತ ಕುಲಪತಿ ಡಾ. ಯೆನೆಪೊಯ ಅಬ್ದುಲ್ಲ ಕುಂಞಿ ಅವರು, ವಯನಾಡ್ ಭೂಕುಸಿತದಲ್ಲಿ ವಿಪತ್ತು ಪೀಡಿತ ಕುಟುಂಬಗಳ 100 ಅರ್ಹ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಉಚಿತ ಶಿಕ್ಷಣವನ್ನು ನೀಡಲಿದೆ ಎಂದು ಘೋಷಿಸಿದರು.

ಪ್ರಸ್ತುತ 1 ರಿಂದ 1 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ಕುಟುಂಬದ ವಿದ್ಯಾರ್ಥಿಗಳು ನಿರ್ದರಿತ ಅರ್ಹತಾ ಮಾನದಂಡಗಳನ್ನು ಪೂರೈಸಿದಲ್ಲಿ ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ ಕೋರ್ಸ್‌ ಳಿಗೆ ಉಚಿತ ಶಿಕ್ಷಣವನ್ನು ಪಡೆಯಲು ಅರ್ಹರಾಗಿರುತ್ತಾರೆ.

ವಿದ್ಯಾರ್ಥಿಗಳು ಯೆನೆಪೋಯ ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಮೂಲಕ ನೀಡಲಾಗುವ ವಿವಿಧ ಕೋರ್ಸ್‌ಗಳಲ್ಲಿ (ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಫಿಸಿಯೋಥೆರಪಿ, ರ‍್ಸಿಂಗ್, ಇಂಜಿನಿಯರಿಂಗ್ ಮತ್ತು ವೃತ್ತಿಪರ ಪದವಿ ಕೋರ್ಸ್‌) ಪ್ರವೇಶವನ್ನು ಪಡೆಯಬಹುದು. ಇಂತಹ ವಿದ್ಯಾರ್ಥಿಗಳ ಅಧ್ಯಯನದ ಅವಧಿಯ ಶೈಕ್ಷಣಿಕ ಶುಲ್ಕ, ಆಹಾರ ಮತ್ತು ವಸತಿಯನ್ನು ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಉಚಿತವಾಗಿ ಭರಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.