ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಆಯೋಜಿಸಿರುವ ಜಿಲ್ಲಾ ಶೈಕ್ಷಣಿಕ ಸಹಮಿಲನವು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್‌ಕಲ್ಲಡ್ಕಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಶಕ್ತಿ ವಿದ್ಯಾಲಯ ಮಂಗಳೂರಿನ ಅಧ್ಯಕ್ಷರಾದ ಶ್ರೀ ಕೆ.ಸಿ.ನಾಯಕ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ.ಪ್ರಭಾಕರ್ ಭಟ್‌ಕಲ್ಲಡ್ಕಕಾರ್ಯಕ್ರಮದ ಬಗ್ಗೆ ಮಾತನಾಡಿ ಸಾಮರಸ್ಯದರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಹಾಗೂ ಮಕ್ಕಳಲ್ಲಿ ಮಾತೃಭೂಮಿಯಕಲ್ಪನೆಯನ್ನು ಮೂಡಿಸಬೇಕು ಸನಾತನ ಧರ್ಮದರಕ್ಷಣೆ ನಮ್ಮೆಲ್ಲರ ಹೊಣೆ.ಸ್ವಂತಿಕೆಯ ಶಿಕ್ಷಣವು ಮಕ್ಕಳಿಗೆ ದೊರೆಯಬೇಕು ಇದು ವಿದ್ಯಾಭಾರತಿಯ ಕಲ್ಪನೆಯಾಗಿದೆ ಹಾಗೂ ಸ್ವದೇಶಿ ವಸ್ತುಗಳ ಬಳಕೆ, ಸಂಸ್ಕಾರಯುತ ಜೀವನವನ್ನು ನಡೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು
.
ಶಾರದ ಸಮೂಹ ಸಂಸ್ಥೆಗಳು ಮಂಗಳೂರುಇದರಅಧ್ಯಕ್ಷರಾದಡಾ.ಎ. ಬಿ. ಪುರಾಣಿಕ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರವು ಬಹಳ ಮಹತ್ವವಾದದ್ದು ಹಾಗೂ ವಿದ್ಯಾರ್ಥಿಗಳನ್ನು ದೇಶದ ಶ್ರೇಷ್ಠ ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಎಂದರು.

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಆಯೋಜಿಸಿರುವ ಜಿಲ್ಲಾ ಶೈಕ್ಷಣಿಕ ಸಹಮಿಲನವು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆಯಿತು.

ವಿದ್ಯಾಭಾರತಿಜಿಲ್ಲಾಧ್ಯಕ್ಷರಾದಲೋಕಯ್ಯಡಿ.ಇವರುಪ್ರಾಸ್ತವಿಕನುಡಿಗಳಲ್ಲಿ ವಿದ್ಯಾಭಾರತಿ ಹಮ್ಮಿಕೊಳ್ಳುವ ಶೈಕ್ಷಣಿಕ ಸಹಮಿಲನದ ವಿಶೇಷತೆಯ ಬಗ್ಗೆ ತಿಳಿಸಿದರು.ವಿದ್ಯಾಭಾರತಿ ಯೋಜನೆಗಳನ್ನು ಕಾರ್ಯರೂಪಕ್ಕೆತರಲುಎಲ್ಲಾ ಸಂಸ್ಥೆಗಳು ಪ್ರಯತ್ನ ಪಡಬೇಕುಇತರ ದೇಶಗಳು ವಿದ್ಯಾಭಾರತಿ ಸಂಸ್ಥೆಗಳು ನೀಡುವ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಹಾಗೆ ಆಗಬೇಕು ಎಂದರು.

ವಿದ್ಯಾಭಾರತಿಕರ್ನಾಟದ ಪ್ರಾಂತಉಪಾಧ್ಯಕ್ಷರು ಶ್ರೀಪತಿಯವರು ಸಮಗ್ರ ವಿಕಾಸ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಮಾಡಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ಶ್ರೀ ವಸಂತ ಮಾಧವ ಮಾತನಾಡಿ ಶಾರೀರಿಕವಾಗಿ ಬೌದ್ಧಿಕವಾಗಿ ದೇಶಭಕ್ತ ಸಮಾಜದ ನಿರ್ಮಾಣವಾಗಬೇಕು ಈ ದೆಸೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳೆಸುವುದು ಪ್ರೋತ್ಸಾಹಿಸುವುದು ನಮ್ಮೆಲ್ಲರ ಶಾಲಾ ವಾತಾವರಣದಲ್ಲಿ ನಿರ್ಮಾಣವಾಗಬೇಕೆಂದರು.

ಕರ‍್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಮೇಳ ಮತ್ತುಕ್ರೀಡೆಯಲ್ಲಿರಾಷ್ಟçಮಟ್ಟದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶ್ರೀರಾಮ ವಿದ್ಯಾಕೇಂದ್ರದಅಧ್ಯಕ್ಷರಾದಬಿ .ನಾರಾಯಣ ಸೋಮಯಾಜಿ, ಸರಸ್ವತಿ ವಿದ್ಯಾಲಯಕಡಬದ ಸಂಚಾಲಕರು ವೆಂಕಟ್ರಮಣರಾವ್ ಮಂಕುಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ವಸಂತ ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರು.ವಿದ್ಯಾಭಾರತಿಜಿಲ್ಲಾಕಾರ್ಯದರ್ಶಿಗಳು ರಮೇಶ್. ಕೆ, ಧನ್ಯವಾದಗೈದು ದಿನಪೂರ್ತಿ ನಡೆದಕರ‍್ಯಕ್ರಮದ ವರದಿಯನ್ನು ನೀಡಿದರು.
ಪದವಿಪೂರ್ವ ವಿದ್ಯಾಲಯದಉಪನ್ಯಾಸಕಿ ಶೋಭಾ ವಿ. ಶೆಟ್ಟಿ ಮತ್ತು ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.