ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ 25ನೇ ವರ್ಷದ ಕಾರ್ಗಿಲ್ ಸಂಸ್ಮರಣೆಯನ್ನು ಮಾಜಿ ಸೈನಿಕರೊಂದಿಗೆ ಜು.27ರಂದು ಹಮ್ಮಿಕೊಳ್ಳಲಾಯಿತು.

ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲೆಯಲ್ಲಿ ಕಾರ್ಗಿಲ್ ಸಂಸ್ಮರಣೆ
ಚಂಡಿಗಢ, ಹರಿಯಾಣ, ಲಡಾಖ್, ಪಂಜಾಬ್, ಉತ್ತರಪ್ರದೇಶದಲ್ಲಿ ಪ್ಯಾರಾಟ್ರೂಪರ್ ಕಮಾಂಡೋ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಸತೀಶ್ ಸುವರ್ಣ ಮಾತನಾಡಿ, “ದೇಶದ ಸರ್ವೊಚ್ಛ ಬಲಿದಾನದ ಪ್ರತೀಕ ಕಾರ್ಗಿಲ್ಯುದ್ದ. ನಾವು ಸೈನಿಕರಾಗಿ ವೇದಿಕೆಯಲ್ಲಿ ಉಪಸ್ಥಿತರಿರಬೇಕಾದರೆ, ಅದಕ್ಕೆ ಕಾರಣ ವಿದ್ಯಾರ್ಥಿ ಜೀವನದಲ್ಲಿ ತೆಗೆದುಕೊಂಡ ನಿರ್ಧಾರ ಕಾರಣ. ಆದ್ದರಿಂದ ವಿದ್ಯಾರ್ಥಿಗಳಾದ ನೀವು ದೇಶದ ಬುನಾದಿ ಗಟ್ಟಿಗೊಳಿಸುವ, ಉನ್ನತಿಗೆ ಕೊಂಡೊಯ್ಯುವ, ಆತ್ಮಸ್ಥೈರ್ಯ ನಿಮ್ಮಲ್ಲಿ ಬರಲಿ. ನಮ್ಮ ಸೈನಿಕರು ಅಸಾಧ್ಯವಾದುದನ್ನು ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾರೆ. ನಾಳೆಯ ಜೀವನದಲ್ಲಿ ಏನಾಗಬೇಕು ಎಂದು ನಿರ್ಧರಿಸದಿದ್ದರೂ ನಿಮ್ಮ ಪ್ರಯತ್ನಕ್ಕೆ ಪೂರ್ಣವಿರಾಮ ಹಾಕಬೇಡಿ. ಒಬ್ಬ ವ್ಯಕ್ತಿಯಾಗಿ ಮಾತ್ರ ಬೆಳೆಯದೇ, ವ್ಯಕ್ತಿತ್ವದ ಬೆಳವಣಿಗೆಯಾಗಬೇಕು. ಸೈನಿಕರ ಜೀವನವನ್ನು ಆದರ್ಶವಾಗಿಟ್ಟುಕೊಂಡು ದೇಶದ ಒಳಿತಿಗಾಗಿ ಪ್ರಯತ್ನಿಸಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮೊದಲಿಗೆ ಮಾಜಿ ಸೈನಿಕರಿಂದ ದೀಪಪ್ರಜ್ವಲನೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ನಡೆಯಿತು.

ಜುಲೈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು.
ಬಳಿಕ ಜುಲೈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಹುಟ್ಟುಹಬ್ಬ ಆಚರಿಸುವ ಮಕ್ಕಳಿಗೆ ಅಧ್ಯಾಪಕ ವೃಂದದವರು ಆರತಿ-ಅಕ್ಷತೆ, ತಿಲಕಧಾರಣೆ ಮಾಡಿ ಸಿಹಿನೀಡಿದರು. ಮಕ್ಕಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ನಿಧಿ ಸಮರ್ಪಿಸಿ ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು.
ಭೂಸೇನೆಯ ಇ.ಎಂ.ಇ ಕ್ರಾಪ್ಸ್ ರಿಕವರಿ ಮೆಕ್ಯಾಮಿಕ್ ಆಗಿ ಸೇರ್ಪಡೆಗೊಂಡು, ನಾಯಕ್ ಪದವಿ ಪಡೆದು ನಿವೃತ್ತ ಹೊಂದಿದ, ಚಂದ್ರಶೇಖರ್ ಮಾತನಾಡಿ, “ವಿದ್ಯಾರ್ಥಿ ಜೀವನದಿಂದಲೇ ಶಿಸ್ತು, ಸಂಯಮ, ಸದಾಚಾರದದ ಜೊತೆಗೆ ದೇಶಭಕ್ತಿಯನ್ನು ಬೆಳೆಸಬೇಕು. ಇಂದಿನ ದೃಶ್ಯಮಾಧ್ಯಮ ನೋಡಿದಾಗ, ದೇಶದ ಸ್ಥಿತಿ ಎತ್ತ ಸಾಗುತ್ತಿದೆ ಎನ್ನುವುದು ಅರಿವಾಗುತ್ತಿದೆ. ದೇಶ ಹೊರಗಿನ ಶತ್ರುಗಳಿಗಿಂತ, ಒಳಗಿನ ಶತ್ರುಗಳಿಂದಲೇ ನಲುಗುತ್ತಿದೆ. ದೇಶದ ಗಾಳಿ, ಅನ್ನ ಸೇವಿಸಿ ನಾನು ದೇಶಕ್ಕೆ ಏನಾದರೂ ಕೊಡುಗೆಯನ್ನು ಕೊಡಬೇಕೆಂಬ ಮನಸ್ಸು ಬರಬೇಕು. ಈ ದೇಶಪ್ರೇಮ ಮೂಡಿಸುವ ಕಾರ್ಯವನ್ನು ಶ್ರೀರಾಮ ವಿದ್ಯಾಸಂಸ್ಥೆ ಮೊದಲಿನಿಂದಲೂ ಮಾಡುತ್ತಾ ಬರುತ್ತಿದೆ. ಸೇನೆಗೆ ಸೇರುವುದು ದೇಶದ ಅತ್ಯುತ್ತಮ ಶ್ರೇಷ್ಟ ಸೇವೆಯೆಂದು ಪರಿಗಣಿಸಲಾಗುತ್ತಿದೆ. ಸೇನೆಗೆ ಸೇರುವ ಮೂಲಕ ಮಾತ್ರ ದೇಶ ಸೇವೆಯೆಂದು ಪರಿಗಣಿಸುವುದಲ್ಲ, ಎಲ್ಲಾ ವೃತ್ತಿಯಲ್ಲೂ ಸೇವೆ ಸಲ್ಲಿಸುವ ಮೂಲಕ ದೇಶ ಸೇವೆಯನ್ನು ಮಾಡಬಹುದು” ಎಂದು ಹೇಳಿದರು.

ನಿವೃತ್ತಯೋಧರಿಗೆ ಶ್ರೀರಾಮ ವಿದ್ಯಾಕೆಂದ್ರದ ಸಹಸಂಚಾಲಕರಾದ ರಮೇಶ್ ಎನ್. ಶಾಲು ಹೊದಿಸಿ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತಯೋಧರಿಗೆ ಶ್ರೀರಾಮ ವಿದ್ಯಾಕೆಂದ್ರದ ಸಹಸಂಚಾಲಕರಾದ ರಮೇಶ್ ಎನ್. ಶಾಲು ಹೊದಿಸಿ ಗೌರವ ಸಮರ್ಪಿಸಿದರು. ಅಧ್ಯಾಪಕ ವೃಂದದವರು ಆರತಿ ಬೆಳಗಿ, ತಿಲಕವನ್ನಿಟ್ಟು ಆರ್ಶೀವಾದ ಪಡೆದುಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಭಾರತೀಯ ಭೂಸೇನಾ ನಿವೃತ್ತ ಎ.ಸಿ.ಪಿ ಹವಾಲ್ದಾರ್, ಕರ್ತವ್ಯದ ಸಮಯದಲ್ಲಿ ಪೃಥ್ವಿ 2 ಮಿಸೈಲ್ರಕ್ಷಣಾ ಸಂಶೋಧನೆ ಮತ್ತುಅಭಿವೃದ್ಧಿ ಸಂಸ್ಥೆ ಜೊತೆ ಕ್ಷಿಪಣಿ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ ಜಯಕುಮಾರ್ ಪಿ. ಕೆದಿಲ, ಭಾರತೀಯ ಸೇನೆಯ ಪ್ಯಾರಚ್ಯೂಟ್ ಸೆಕೆಂಡ್ ಪ್ಯಾರಾಕಮಾಂಡೋ ಬೆಟಾಲಿಯನ್ ಆಗಿ ಕಾರ್ಯನಿರ್ವಹಿಸಿ, ಆಪರೇಷನ್ ಮೇಘದೂತ್ ಹಾಗೂ ಆಪರೇಷನ್ ಬ್ಲೂಸ್ಟಾರ್ ಭಾಗವಹಿಸಿ ನಿವೃತ್ತರಾದ ದಯಾನಂದ್ ನಾಯಕ್, ದೇಶದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿ, ನಿವೃತ್ತರಾದರಾಜೇಂದ್ರ, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್., ಶ್ರೀರಾಮ ವಿದ್ಯಾಕೆಂದ್ರದ ಆಡಳಿತ ಮಂಡಳಿಯ ಸದಸ್ಯ ನಾಗೇಶ್ ಹಾಗೂ ಸಹಮುಖ್ಯೋಪಾಧ್ಯಾಯ ಸುಮಂತ್ ಆಳ್ವ ಎಂ. ಉಪಸ್ಥಿತರಿದ್ದರು.
ನಂತರ 7ನೇ ತರಗತಿಯ ಮಾನಸ ಪ್ರೇರಣಾಗೀತೆ ಹಾಡಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಜಾನ್ವಿಎಸ್ ಪಿ. ಸ್ವಾಗತಿಸಿ, ರಾಜೇಶ್ವರಿ ಭಟ್ ನಿರೂಪಿಸಿ ಪ್ರಾಪ್ತಿ ವಂದಿಸಿದರು.