ಬಂಟ್ವಾಳ: ಬೈಪಾಸ್ ಸಮೀಪದ ಭಂಡಾರಿಬೆಟ್ಟು ಎಂಬಲ್ಲಿ, ವತ್ಸಿ ವಸತಿ ಸಮುಚ್ಚಯದ ಪಕ್ಕದಲ್ಲಿ ಇರುವ ತೋಡಿನಲ್ಲಿ ನೀರು ನಿಂತಿರುವುದರಿಂದ, ಕೆಟ್ಟ ವಾಸನೆ ಉಂಟಾಗಿ, ಕೊಚ್ಚೆ ನಿರ್ಮಾಣವಾಗಿ, ಸೊಳ್ಳೆಗಳ ಕಾಟ ಕೂಡಾ ಹೆಚ್ಚಾಗಿರುವುದರಿಂದ ವಸತಿ ಸಮುಚ್ಚಯದ ನಿವಾಸಿಗಳಿಗೆ ಮತ್ತು ಆಸುಪಾಸಿನವರಿಗೆ ತೊಂದರೆ ಉಂಟಾಗಿರುತ್ತದೆ.
ಆದುದರಿಂದ ಈ ಸಮಸ್ಯೆಯಿಂದ ತಕ್ಷಣವೇ ಶಾಶ್ವತ ಪರಿಹಾರ ನೀಡಬೇಕು ಮತ್ತು ಆ ನೀರು ಮುಂಚೆ ಯಾವ ರೀತಿ ಹರಿದು ಹೋಗುತ್ತಿತ್ತು, ಯಥಾ ಪ್ರಕಾರ ಹರಿದು ಹೋಗುವಂತೆ ಮಾಡಿ ಅದನ್ನು ಸ್ವಚ್ಛಗೊಳಿಸಿ ಬಿಡಿಸಿ ಕೊಡಬೇಕಾಗಿ, ಬಂಟ್ವಾಳ ತಾಲೂಕಿನ ತಹಶೀಲ್ದಾರ ಕೂಡಲಗಿಯವರಿಗೆ ಹಾಗೂ ಪುರಸಭಾ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ವತ್ಸಿ ರೆಸಿಡೆನ್ಸಿ ಬಿಲ್ಡಿಂಗ್ ಮಾಲಕರ ಸಂಘದ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವತ್ಸಿ ರೆಸಿಡೆನ್ಸಿ ಬಿಲ್ಡಿಂಗ್ ಮಾಲಕರ ಸಂಘದ ಗೌರವಾಧ್ಯಕ್ಷ ರಾಜೇಶ್ ಸುವರ್ಣ, ಅಧ್ಯಕ್ಷ ನೆಲ್ಸನ್ ಮೋನಿಸ್, ಉಪಾಧ್ಯಕ್ಷ ಸೋಮಯ್ಯ ಎಚ್, ಖಜಾಂಚಿ ಜಯಕೀರ್ತಿ ಹಾಗೂ ಪ್ಲ್ಯಾಟ್ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ನೋಣಯ್ಯ ಹಾಜರಿದ್ದರು.