ಕಲ್ಲಡ್ಕ : ಅನಾರೋಗ್ಯ ನಿಮಿತ್ತ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರು ಆದ ಕ್ರಿಟಿಕಲ್ ಫಂಡ್ ಸಹಾಯಧನ ರೂಪಾಯಿ 30,000/ ಚೆಕ್ಕನ್ನು ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಬಾಯಿಲ ನಿವಾಸಿ ಹೇಮಲತಾ ರವರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಬಿಲ್ಲವ ಸಂಘ ವೀರಕಂಭ ಗ್ರಾಮ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ಗ್ರಾಮಾಭಿವೃದ್ಧಿ ತಾಲೂಕ್ ಯೋಜನಾಧಿಕಾರಿ ರಮೇಶ್, ಯೋಜನೆಯ ಕಲ್ಲಡ್ಕ ವಲಯ ಅದ್ಯಕ್ಷೆ ತುಳಸಿ, ವೀರಕಂಭ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಸೇವಾಪ್ರತಿನಿಧಿ ವಿಜಯ, ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.