ಬೆಂಗಳೂರು: ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸಿದರು.

ಪ್ರತಿಭಟನೆ ಭಾಗವಾಗಿ ರಾತ್ರಿ ವಿಧಾನಸೌಧದ ಒಳಗೆ ಮಲಗಿ ಬಿಜೆಪಿ-ಜೆಡಿಎಸ್ ನಾಯಕರು ಧರಣಿ ನಡೆಸಿದ್ದಾರೆ. ಮತ್ತೆ ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿ ವಾಕಿಂಗ್ ಮಾಡಿದ್ದಾರೆ. ವಿಧಾನಸೌಧ ಆವರಣ ಮತ್ತು ಸುತ್ತಮುತ್ತ ವಾಕಿಂಗ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಾಜಿ ಸಚಿವ ಪ್ರಭು ಚೌಹಾಣ್ ಮಾತನಾಡಿ ಚರ್ಚೆಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಇಂದು ಕೂಡ ಧರಣಿ ಮಾಡುತ್ತೇವೆ. ಮುಡಾ ಹಗರಣ ಬಹು ದೊಡ್ಡ ಹಗರಣ. ಈ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ಸ್ವೀಕರ್ ಅವರು ಚರ್ಚೆಗೆ ಅವಕಾಶ ನೀಡಿಲ್ಲ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ನ ಶಾಸಕರು ಪರಿಷತ್ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ಅಹೋರಾತ್ರಿ ಧರಣಿ ನಡೆಸಲಾಗಿದೆ. ಗಂಭೀರವಾದ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ. ಹೀಗಾಗಿ ಬಿಜೆಪಿ-ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದೇವೆ. ಮುಡಾ ವಿಚಾರದಲ್ಲಿ ಸದನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ. ಮುಂದೆ ಏನು ಮಾಡಬೇಕು ಎಂದು ಪಕ್ಷದ ಎಲ್ಲರೂ ಸಭೆ ಸೇರಿ ನಿರ್ಧಾರ ಮಾಡಲಾಗುತ್ತೆ ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಚರ್ಚೆಗೆ ಅವಕಾಶ ನೀಡಬೇಕು. ಒಂದು ವಾರದಿಂದ ಎರಡು ವಿಷಯಗಳ ಬಗ್ಗೆ ನಿಲುವಳಿಗೆ ಪಶ್ನೆ ಮಾಡಿದ್ದೇವೆ. ಮುಡಾ ಹಗರಣಗಳನ್ನ ಮುಚ್ಚಿಹಾಕಲು ಯತ್ನ. ಮುಡಾ ವಿಚಾರದಲ್ಲಿ ಎಲ್ಲಾ ದಾಖಲೆ ಸೃಷ್ಟಿ ಮಾಡಿದ್ದಾರೆ. ಬಿಜೆಪಿ ಮೇಲೆ ಹಗರಣ ಆರೋಪ ಮಾಡಿದ್ದಾರೆ. ಬಿಜೆಪಿ ಇರಲಿ ಯಾರೇ ಹಗರಣದಲ್ಲಿ ಭಾಗಿಯಾದ್ರೆ ಹಿಡಿದು ಜೈಲಿಗೆ ಹಾಕ್ರಿ. ಕರ್ನಾಟಕ ಸ್ವಚ್ಛತಾ ಆಗುತ್ತೆ. ಅಂಬಿ ಚುಪ್ ತುಂಬಿ ಚುಪ್ ಕೊನೆಗೆ ಕರ್ನಾಟಕ ಸಂಪನ್ಮೂಲ ಲೂಟಿ ಎಲ್ಲಾ ಕಡೆ ಆಸ್ತಿ ಮಾಡುತ್ತಾರೆ. ಸದನದಲ್ಲಿ ಸಿದ್ದರಾಮಯ್ಯ ಸುಮ್ಮನೆ ಕೂತಿರುತ್ತಾರೆ. ಎಲ್ಲಿಗೆ ಬಂತೋ ಸಿದ್ರಾಮೋ. ವಿಧಾನಸಭೆ, ಲೋಕಸಭೆ, ಎಲ್ಲಾ ತನಿಖೆ ಮಾಡಿಸಲಿ ಒತ್ತಾಯಿಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಬೆಳ್ಳಂಬೆಳಗ್ಗೆ ಶಾಸಕರು ಯೋಗಾದಲ್ಲಿ ನಿರತರಾದರು. ತಲೆ ಮೇಲೆ ದಿಂಬು, ಬೆಡ್‌ಶೀಟ್ ಹೊತ್ತು ಮಾಜಿ ಸಚಿವ ಪ್ರಭು ಚೌಹಾಣ್ ಹೊರಟರು.