ಗ್ರಾಮ ಪಂಚಾಯತಿಗಳು ಹಾಗೂ ಸ್ಥಳೀಯ ಯೋಜನೆ ಪ್ರದೇಶದ ಹೊರ ಭಾಗದಲ್ಲಿರುವ ಒಂದು ಏಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಾಣಿಜ್ಯ ಸಂಬಂಧ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯ ಸಮಸ್ಯೆಗಳ ಪರಿಹಾರದ ಕುರಿತಾಗಿ ಇಂದು ಜು.25 ರಂದು ಮಾನ್ಯ ಸಭಾಧ್ಯಕ್ಷರಾದ ಯ.ಟಿ. ಖಾದರ್ ನೇತೃತ್ವದಲ್ಲಿ ನಡೆದ ಕರಾವಳಿ ಭಾಗದ ಶಾಸಕರ ಸಭೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭಾಗವಹಿಸಿದರು.

ಸಭಾಧ್ಯಕ್ಷರಾದ ಯ.ಟಿ. ಖಾದರ್ ನೇತೃತ್ವದಲ್ಲಿ ನಡೆದ ಕರಾವಳಿ ಭಾಗದ ಶಾಸಕರ ಸಭೆ

ಗ್ರಾಮ ಪಂಚಾಯತಿಗಳು ಹಾಗು ಸ್ಥಳೀಯ ಯೋಜನೆ ಪ್ರದೇಶದ ಹೊರ ಭಾಗದಲ್ಲಿರುವ ಒಂದು ಏಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಾಣಿಜ್ಯ ಸಂಬಂಧ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆ ನಗರ ಹಾಗೂ ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ವಹಿಸಿರುವುದರಿಂದ ಕಾರ್ಯಭಾರದ ಒತ್ತಡದಿಂದ ಕಡತ ವಿಲೇವಾರಿಯಾಗದೆ ಬಂಟ್ವಾಳ ತಾಲ್ಲೂಕಿನ ನೂರಾರು ಕಡತಗಳು ಬಾಕಿಯಿದ್ದು, ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗಿರುವ ಬಗ್ಗೆ ರಾಜೇಶ್ ನಾಯ್ಕ್ ಅವರು ಸಭೆಯಲ್ಲಿ ಸವಿವರವಾಗಿ ಪ್ರಸ್ತಾಪಿಸಿದರು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭಾಗವಹಿಸಿದರು.

ಈ ಹಿಂದೆ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳಲ್ಲಿ ನೀಡಲಾಗುತ್ತಿದ್ದು, ಅದನ್ನು ಬದಲಾಯಿಸಿ ನಗರ ಮತ್ತು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ವಹಿಸಿರುವುದರಿಂದ ಕಾರ್ಯಭಾರದ ಒತ್ತಡದಿಂದ ಕಡತ ವಿಲೇವಾರಿ ವಿಳಂಭವಾಗಿ ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗಿರುತ್ತದೆ. ಇದನ್ನು ಬದಲಾಯಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ ಕಡತಗಳನ್ನು ಬೂಡಾ ದಲ್ಲಿಯೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಶಾಸಕರ ರಾಜೇಶ್ ನಾಯ್ಕ್ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿದರು.

ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗಿರುವ ಬಗ್ಗೆ ರಾಜೇಶ್ ನಾಯ್ಕ್ ಅವರು ಸಭೆಯಲ್ಲಿ ಸವಿವರವಾಗಿ ಪ್ರಸ್ತಾಪಿಸಿದರು.

ಸಭಾಧ್ಯಕ್ಷರಾದ ಯು.ಟಿ.ಖಾದರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಪೌರಾಡಳಿತ ಸಚಿವರಾದ ರಹೀಂ ಖಾನ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ದೀಪಕ್ ಚೋಳನ್, ನಗರ ಮತ್ತು ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ತಿಪ್ಪೇಸ್ವಾಮಿ, ಮತ್ತಿತರ ಅಧಿಕಾರಿಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿದ್ದರು.