ಶ್ರೀಕೃಷ್ಣ ಮಂದಿರ ಅಮ್ಟೂರು ಇದರ ೨೫ನೇ ವರ್ಷದ ವಾರ್ಷಿಕೋತ್ಸವಕ್ಕೆ ಹಮ್ಮಿಕೊಂಡಿರುವ 25 ಕಾರ್ಯಕ್ರಮಗಳಲ್ಲಿ 13ನೇ ಕಾರ್ಯಕ್ರಮವಾಗಿ ಸಸಿಗಳನ್ನು ನೆಡುವಮತ್ತು ಸಸಿ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಮದ ನಿಮಿತ್ತ ಮಂದಿರದ ಸುತ್ತ ಮುತ್ತ ಸಸಿಗಳನ್ನು ನೆಟ್ಟು, ಭಾಗವಹಿಸಿದ ಎಲ್ಲರಿಗೂ ಸಸಿಗಳನ್ನು ವಿತರಿಸಿ ತಮ್ಮತಮ್ಮ ಮನೆಗಳಲ್ಲಿ ಸಸಿಗಳನ್ನು ನೆಡಲು ಪ್ರೇರಣೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷರು ರಮೇಶ್ ಕರಿಂಗಾಣ, ಉಪಾಧ್ಯಕ್ಷರುಗಳಾದ ಶರತ್‌ಕುಮಾರ್, ಮಹಾಬಲ ಕುಲಾಲ್, ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಮತ್ತು ಮಂದಿರದ ಇತರ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ಮೇಲ್ವಿಚಾರಕಿ ವನಿತಾ ಉಪಸ್ಥಿತರಿದ್ದರು.