ಬಂಟ್ವಾಳ : ಗುರಿ ಮತ್ತು ನಿರೀಕ್ಷೆಗಳ ಸ್ಪಷ್ಟ ಅರಿವು ಇದ್ದಾಗ ನಾಯಕತ್ವ ಯಶಸ್ವೀಯಾಗಲು ಸಾಧ್ಯ ಎಂದು ತರಬೇತುದಾರ ಅಭಿಜಿತ್ ಕರ್ಕೇರಾ ತಿಳಿಸಿದರು.
ಅವರು ಬಿ.ಸಿ.ರೋಡಿನ ಯುವವಾಹಿನಿ ಭವನದಲ್ಲಿ ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಯುವವಾಹಿನಿ ಸದಸ್ಯರಿಗೆ ನಡೆದ ಮಿಷನ್ 2024 ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಇತರರನ್ನು ಯಶಸ್ಸಿನತ್ತ ಪ್ರೇರೇಪಿಸಿ ಸೂಕ್ತ ಮಾರ್ಗದರ್ಶನ ನೀಡುವುದೇ ನೈಜ ನಾಯಕತ್ವ, ಸಂಸ್ಥೆಯ ಗುರಿ ಮತ್ತು ನಿರೀಕ್ಷೆಗಳ ಸ್ಪಷ್ಟ ಅರಿವು ಇದ್ದಾಗ ನಾಯಕತ್ವದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಕತಾರ್ ಬಿಲ್ಲವಾಸ್ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಕಾರ್ಯಾಗಾರ ಉದ್ಘಾಟಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ದಿನೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ವ್ಯಕ್ತಿತ್ವ ವಿಕಸನ ನಿರ್ದೇಶಕ ರಾಜೇಂದ್ರ ಪಲ್ಲಮಜಲು , ಸಲಹೆಗಾರ ಟಿ.ಶಂಕರ ಸುವರ್ಣ ಉಪಸ್ಥಿತರಿದ್ದರು.
ಸುಮಾರು 75 ಸದಸ್ಯರು ವಿವಿಧ ಚಟುವಟಿಕೆಗಳ ಮೂಲಕ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು
ದಿನೇಶ್ ಸುವರ್ಣ ಸ್ವಾಗತಿಸಿದರು, ಜತೆ ಕಾರ್ಯದರ್ಶಿ ಸುನೀಲ್ ಸಾಲ್ಯಾನ್ ವಂದಿಸಿದರು.